ಮುಂಬೈ : ಸಾವು ಅನ್ನೋದು ಯಾರಿಗೆ ಹೇಗೆ, ಎಲ್ಲಿ, ಯಾವಾಗ ಬರುತ್ತೆ ಅಂತ ಹೇಳೋಕೆ ಅಸಾಧ್ಯ. ಅದೇ ರೀತಿಯ ದುರಂತ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ಕಾರಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಂಡೆ ಕಲ್ಲೊಂದು ಬೆಟ್ಟದಿಂದ ಉರುಳಿ ಕಾರಿನ ಸನ್‌ರೂಫ್‌ನಿಂದ ಒಳಗೆ ಬಿದ್ದು ಮಹಿಳೆ ಸಾವನ್ನಪ್ಪಿದ್ದಾಳೆ. ಸ್ನೇಹಲ್ ಗುಜರಾತಿ (43) ಮೃತ ಮಹಿಳೆ.

ಮಹಾರಾಷ್ಟ್ರದ ಪರ್ವತ ಮಾರ್ಗವಾದ ತಮ್ಹಿನಿ ಘಾಟ್‌ನಲ್ಲಿ ಈ ಘಟನೆ ನಡೆದಿದೆ. ಮಹಿಳೆಯು ಪುಣೆಯಿಂದ ಮಂಗಾವ್‌ಗೆ ವೋಕ್ಸ್ವ್ಯಾಗನ್ ವರ್ಟಸ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಲಿಸುತ್ತಿದ್ದ ಕಾರಿನ ಮೇಲೆ ಬಂಡೆ ಕಲ್ಲೊಂದು ಉರುಳಿ ಸನ್‌ರೂಫ್ ಮೂಲಕ ಒಳಗೆ ಬಿದ್ದಿದೆ. ಮಹಿಳೆ ಕೂತಿದ್ದ ಸೀಟಿನ ಮೇಲೆ ಬಿದ್ದಿದ್ದರಿಂದ ಆಕೆಯ ತಲೆಗೆ ನೇರವಾಗಿ ಬಂಡೆ ಕಲ್ಲು ಬಡಿದು, ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಇದನ್ನೂ ಓದಿ : ನಮ್ಮ ಮೆಟ್ರೋದಲ್ಲಿ ಯಶಸ್ವಿಯಾಗಿ ಶ್ವಾಸಕೋಶ ರವಾನೆ | ಕೇವಲ 61 ನಿಮಿಷದಲ್ಲಿ ಆಸ್ಪತ್ರೆ ತಲುಪಿದ ವೈದ್ಯರ ಟೀಮ್!



















