ನವದೆಹಲಿ : ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಡ್ರಗ್ ಜಾಲದ ವಿರುದ್ಧ ನಡೆಯುತ್ತಿರುವ ದಾಳಿಯ ಭಾಗವಾಗಿ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಗೋವಾದಲ್ಲಿ ಆತನ ಸಹಚರ ಡ್ಯಾನಿಶ್ ಚಿಕ್ನಾ ಎಂಬಾತನನ್ನು ಬಂಧಿಸಿದೆ.
ಡ್ಯಾನಿಶ್ ಚಿಕ್ನಾ ದಾವೂದ್ ಇಬ್ರಾಹಿಂನ ಆಪ್ತ ಹಾಗೂ ಭಾರತದಲ್ಲಿನ ಡ್ರಗ್ ನೆಟ್ವರ್ಕ್ನ ಮ್ಯಾನೇಜರ್ ಆಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎನ್ಸಿಬಿ ಅಧಿಕಾರಿಗಳು ಕಳೆದ ಕೆಲವು ದಿನಗಳಿಂದ ಡ್ಯಾನಿಶ್ ಚಿಕ್ನಾನಿಗಾಗಿ ಶೋಧಕಾರ್ಯ ನಡೆಸುತ್ತಿದ್ದರು. ಇದೀಗ ಆತನ್ನನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಅಕ್ಟೋಬರ್ 23ರಂದು ದುಬೈ ಮೂಲದ ಹ್ಯಾಂಡ್ಲರ್ ಮೊಹಮ್ಮದ್ ಸಲೀಂ ಶೇಖ್ ಅವರನ್ನು ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳು ಬಂಧಿಸಿದ್ದರು. ಶೇಖ್, ದಾವೂದ್ ಇಬ್ರಾಹಿಂನ ಸಹಚರ ಸಲೀಂ ಡೋಲಾ ಜೊತೆ ಸೇರಿ ಮಹಾರಾಷ್ಟ್ರದಲ್ಲಿ ಮೆಫೆಡ್ರೋನ್ ಉತ್ಪಾದನೆ ಮತ್ತು ಸರಬರಾಜು ಜಾಲವನ್ನು ನಿರ್ವಹಿಸುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಶೇಖ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು. ಯುಎಇಯಿಂದ ಭಾರತಕ್ಕೆ ಹಸ್ತಾಂತರಗೊಂಡ ನಂತರ, ಅಕ್ಟೋಬರ್ 22ರಂದು ಅವರನ್ನು ಅಧಿಕೃತವಾಗಿ ಬಂಧಿಸಲಾಯಿತು. ಅಲ್ಲದೇ ಶೇಖ್ ಮತ್ತು ಡೋಲಾ ಇಬ್ಬರೂ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತರಾಗಿದ್ದರು ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ : ಪಾಕ್ ಸೆರೆ ಹಿಡಿದ ಪೈಲಟ್ ಶಿವಾಂಗಿ ಸಿಂಗ್ ಜೊತೆ ಫೋಟೋ ತೆಗೆಸಿದ ರಾಷ್ಟ್ರಪತಿ



















