ಬೆಂಗಳೂರು : ಬಿಜೆಪಿಯವರು ನನ್ನನ್ನು ವಿಷ್ಣುವಿನ ಮಾಡ್ರನ್ ಅವತಾರದಲ್ಲಿ ನೋಡ್ತಿದ್ದಾರೆ. ಮೊನ್ನೆ ಒಂದು ಪದ ಬಳಸಿದ್ರು ‘ಹಂದಿ’ ಎಂದರು ಕಾಂತಾರದಲ್ಲಿ ಒಂದು ಸಾಲಿದೆ ವರಾಹ ರೂಪಮ್ ಅಂತಾ, ಅದರ ಅರ್ಥ ವಿಷ್ಣು ಹಂದಿಯ ಅವತಾರ ತಾಳಿ ಭೂಮಿಯಲ್ಲಿ ಅಸಮರ್ಥರನ್ನ ಸೋಲಿಸುತ್ತಾನೆ. ಅವರು ನನ್ನನ್ನು ವಿಷ್ಣುವಿನ 3ನೇ ಅವತಾರ ಅಂತಾ ಭಾವಿಸಿದ್ದಾರೆ. ಎಂದು ಮಾಧ್ಯಮಗಾರರ ಮುಂದೆ ಪ್ರದೀಪ್ ಈಶ್ವರ್ ಹೇಳಿದರು.
ನಾಯಕತ್ವ ಬದಲಾವಣೆ ವಿಚಾರ ಕೇಳಿದಾಗ ಬಹುಷಃ ಬದಲಾವಣೆ ಆಗಬಹುದೇನೋ, ಯಾರು ಮಿನಿಸ್ಟರ್ ಯಾರು ಸಿಎಂ ಆಗ್ಬೇಕು ಅಂತಾ ಹೇಳೋವಷ್ಟು ದೊಡ್ಡವನು ನಾನಲ್ಲ. ನಾನೊಬ್ಬ ಎಂಎಲ್‌ಎ ಅಷ್ಟೇ ಎಂದರು. ರಾಜಣ್ಣ ಸಾಹೇಬ್ರು ಡಿಸಿಎಂ ಸಾಹೇಬ್ರು ದೊಡ್ಡವರಿದ್ದಾರೆ. ನಾನು ಅಷ್ಟು ದೊಡ್ಡವನಲ್ಲ ಎಂದಿದ್ದಾರೆ.
ನಿಮಗೆ ಮಿನಿಸ್ಟರ್ ಆಗೋಕೆ ಆಸೆ ಇಲ್ವಾ ಎಂಬ ಪ್ರಶ್ನೆ ಕೇಳಿದಾಗ ಆಸೆ ಯಾರಿಗೆ ಇರಲ್ಲ ಹೇಳಿ, ಅವಕಾಶ ಕೊಟ್ಟರೆ ನಾನೂ ಆಗುತ್ತೇನೆ. ಇಲ್ಲ ಅಂದ್ರೆ ಪ್ರಮಾಣವಚನಕ್ಕೆ ರಾಜಭವನಕ್ಕೆ ಹೋಗುತ್ತೇನೆ. ಎಂದು ಮಾತನಾಡಿದರು.
ಇದನ್ನೂ ಓದಿ : ಬೆಳ್ಳಂಬೆಳಗ್ಗೆ ಡಿಸಿಎಂ ಡಿಕೆಶಿ ಮನೆಗೆ ತೇಜಸ್ವಿ ಸೂರ್ಯ ಭೇಟಿ!


















