ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದೂ ಸಮಾಜವನ್ನು ಒಡೆಯಲು ಸಾಕಷ್ಟು ಪ್ರಯತ್ನ ನಡೆದಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಜಾತಿ ಜನಗಣತಿ ಸಂದರ್ಭದಿಂದ ಲಿಂಗಾಯತ ವೀರಶೈವ ಸಮಾಜ ಕೂಡ ಛಿದ್ರ ಛಿದ್ರವಾಗಿದ್ದು, ವೀರಶೈವ ಸಮಾಜ ಮತ್ತು ಮುಸಲ್ಮಾನ ಸಮಾಜ ಒಂದೇ ಕೆಲವರು ಎಂದು ಕರೆಯುತ್ತಿದ್ದಾರೆ. ದೇವಸ್ಥಾನಗಳಿಗೆ ಹೋಗಬೇಡಿ ಎಂದು ವೀರಶೈವರಿಗೆ ಹೇಳುವ ಪರಿಸ್ಥಿತಿ ಬಂದಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕನ್ನೇರಿ ಮಠದ ಸ್ವಾಮಿಗಳಿಗೆ ನಿರ್ಬಂಧ ವಿಚಾರವಾಗಿ ಮಾತನಾಡಿ, ಸಮಾಜ ಸೇವೆ ಮಾಡಿಕೊಂಡು ಬಡವರಿಗೆ ಶಿಕ್ಷಣ ಕೊಟ್ಟುಕೊಂಡು ಬರುತ್ತಿರುವ ಕನ್ನೇರಿ ಮಠದ ಸ್ವಾಮಿಗಳಿಗೆ ವಿಜಯಪುರ, ದಾವಣಗೆರೆ ಜಿಲ್ಲೆಗೆ ಬರಬಾರದು ಎಂದು ನಿರ್ಬಂಧ ಹೇರಲಾಗಿದ,. ಇದು ವೀರಶೈವ ಲಿಂಗಾಯಿತ ಸಮಾಜಕ್ಕೆ ಮಾಡಿರುವ ಅವಮಾನ. ಸ್ವಾಮೀಜಿ ಕ್ಷಮೆ ಕೇಳಲಿ, ಕಾಲಿಗೆ ಬಿದ್ದು ಕರೆದುಕೊಂಡು ಹೋಗುತ್ತೇನೆ ಎಂದು ಎಂ.ಬಿ. ಪಾಟೀಲರು ಹೇಳಿದ್ದಾರೆ. ವೀರಶೈವ ಹಾಗೂ ಮುಸಲ್ಮಾನರು ಒಂದೇ ಎನ್ನುವವರಿಗೆ ನಿರ್ಬಂಧ ಹಾಕದೇ ಇರುವವರು ಇವರಿಗೆ ನಿರ್ಬಂಧ ಹಾಕಿದ್ದಾರೆ. ಸಮಾಜದ ಮುಂದೆ ಎಂ.ಬಿ. ಪಾಟೀಲರು ಕ್ಷಮೆ ಕೇಳಬೇಕಿತ್ತು ಎಂದು ಹೇಳಿದ್ದಾರೆ.
ಸ್ವಾಮೀಜಿಗಳ ಮೇಲೆ ಹಠ ಸಾಧಿಸುತ್ತಿರುವುದು ರಾಜ್ಯ ಸರ್ಕಾರಕ್ಕೆ ಕ್ಷೋಭೆ ತರುವುದಿಲ್ಲ. ಇದೇ ನ. 29 ರಂದು ಬೆಳಿಗ್ಗೆ ಬೆಳಗಾವಿಯ ವೀರಶೈವ ಮಠಾಧೀಶರ ನೇತೃತ್ವದಲ್ಲಿ ವಿಶೇಷ ಸಭೆ ಕರೆದಿದ್ದೇವೆ. ಸರ್ಕಾರ ಕನ್ನೇರಿ ಸ್ವಾಮಿಗಳ ಮೇಲೆ ಹಾಕಿರುವ ನಿರ್ಬಂಧವನ್ನು ವಾಪಸ್ ತೆಗೆದುಕೊಳ್ಳಬೇಕು ಇಲ್ಲದಿದರೆ ಮುಂದೆ ಯಾವ ರೀತಿ ಹೋರಾಟ ನಡೆಸಬೇಕೆಂಬ ಚರ್ಚೆ ಆ ಸಭೆಯಲ್ಲಿ ನಡೆಯುತ್ತದೆ ಎಂದು ತಿಳಿಸಿದ್ದಾರೆ.
ನವೆಂಬರ್ ಕ್ರಾಂತಿ ಸಿಎಂ ಬದಲಾವಣೆ ವಿಚಾರದವಾಗಿ ಮಾತನಾಡಿ, ಇಷ್ಟು ಕೆಳಮಟ್ಟಕ್ಕೆ ರಾಜ್ಯ ಸರ್ಕಾರ ಕರ್ನಾಟಕ ರಾಜಕಾರಣವನ್ನು ತೆಗೆದುಕೊಂಡು ಹೋಗಬಾರದಿತ್ತು. ಶಿಸ್ತು ಬಿಟ್ಟು ಹೋಗುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು. ಯಾರೂ ಮುಖ್ಯಮಂತ್ರಿ ಬಗ್ಗೆ ಮಾತನಾಡಬಾರದು ಎಂದಾಗ ಸಿದ್ಧರಾಮಯ್ಯರವರೇ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವೇ ನಿರ್ನಾಮ ಆಗಿರುವ ಸಂದರ್ಭದಲ್ಲಿ ನಮ್ಮನ್ನು ಬಿಟ್ಟರೆ ಏನು ಇಲ್ಲ ಎಂಬಂತೆ ಕರ್ನಾಟಕದ ಕಾಂಗ್ರೆಸ್ ನಾಯಕರು ಆಡುತ್ತಿದ್ದಾರೆ ಎಂದು ಕಿಡಿಕಾತಿದ್ದಾರೆ.
ಸಿ.ಎಂ ಸಿದ್ದರಾಮಯ್ಯ ಹಿಂದುಳಿದ ವರ್ಗದವರ ಚಾಂಪಿಯನ್ ಎಂದು ಹೇಳುತ್ತಾರೆ ಆದರೆ ಅವರಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ರಾಜ್ಯದಲ್ಲಿ ರಸ್ತೆ ತುಂಬೆಲ್ಲ ಗುಂಡಿಗಳೇ ಮುಚ್ಚಿ ಹೋಗಿವೆ ಸ್ವಾತಂತ್ರ್ಯ ಬಂದ ನಂತರ ಅತಿ ಹೆಚ್ಚು ಪಾಪರ ಆದ ಸರ್ಕಾರ ಎಂದರೆ ಕಾಂಗ್ರೆಸ್ ಸರ್ಕಾರ. ಇವರ ಅಧಿಕಾರದ ಎಲ್ಲಿಯವರೆಗೆ ಇರುತ್ತದೆಯೋ ಗೊತ್ತಿಲ್ಲ, ರಾಜ್ಯ ಸರ್ಕಾರವನ್ನು ನಂಬಿದ ಜನರ ಅಭಿವೃದ್ಧಿಗಳಿಗಾದರೂ ಕೆಲಸ ಮಾಡಿ. ಕಾಂಗ್ರೆಸ್ ಸರ್ಕಾರ ಇಷ್ಟೊಂದು ಅರಾಜಕತೆ ಹಿಂದೆಂದೆಂದೂ ಇರಲಿಲ್ಲ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತೆ ಸೋಲುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೆ.ಎಚ್ ಮುನಿಯಪ್ಪ ಮುಖ್ಯಮಂತ್ರಿ ಆದರೆ ಸ್ವಾಗತಿಸುತ್ತೇನೆ; ‘ದಲಿತ ಸಿಎಂ ದಾಳ’ ಉರುಳಿಸಿದ ಜಿ ಪರಮೇಶ್ವರ್



















