ಶಿವಮೊಗ್ಗ: ಗಂಡ ಹಾಗೂ ಅತ್ತೆಯ ಕಿರುಕುಳಕ್ಕೆ ನವವಿವಾಹಿತೆ ವಿಷ ಸೇವಿಸಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕಿನ ಸೂಡೂರು ಬಳಿಯ ಕುರಂಬಳ್ಳಿಯ ಗುಜಾನುಮಕ್ಕಿಯಲ್ಲಿ ನಡೆದಿದೆ.
ಮಾಲಾಶ್ರೀ (23) ಮೃತಪಟ್ಟ ಗೃಹಿಣಿ. ಸಾಗರ ತಾಲೂಕು ಕಟ್ಟಿನಕಾರು ಗ್ರಾಮದ ಯಡಮನೆಯ ಗ್ರಾಮದ ಗಣಪತಿ ಮತ್ತು ಲಕ್ಷ್ಮಮ್ಮ ದಂಪತಿಯ ಪುತ್ರಿ ಮಾಲಾಶ್ರೀ. 2025 ರ ಏಪ್ರಿಲ್ 23 ರಂದು ಕುರಂಬಳ್ಳಿಯ ದೇವೇಂದ್ರಪ್ಪ ಮತ್ತು ನೀಲಮ್ಮ ದಂಪತಿಯ ಪುತ್ರ ಆಶೋಕ್ ಅವರನ್ನು ವಿವಾಹವಾಗಿದ್ದರು.
ಮದುವೆ ನಂತರ ಆಶೋಕ್, ಪತ್ನಿ ಮಾಲಾಶ್ರೀಗೆ ನಿರಂತರ ಕಿರುಕುಳ ನೀಡುತ್ತಿದ್ದಎಂಬ ಆರೋಪ ಕೇಳಿ ಬಂದಿದೆ. ತವರು ಮನೆಯವರೊಂದಿಗೆ ಮಾತನಾಡಲು ಬಿಡದೇ ಕಿರುಕುಳ ನೀಡುತ್ತಿದ್ದ ಹಾಗೂ ತವರು ಮನೆಗೆ ಬಂದ್ದರು ಜೊತೆಯಲ್ಲಿ ಬಂದು, ತಕ್ಷಣ ವಾಪಸ್ ಕರೆದುಕೊಂಡು ಹೋಗುತ್ತಿದ್ದ ಎಂದು ಮಾಲಾಶ್ರೀ ಕುಟುಂಬಸ್ಥರು ಆರೋಪಿಸಿದ್ದಾರೆ.
ಗಂಡ ಹಾಗೂ ಅತ್ತೆಯ ಕಿರುಕುಳದ ಬಗ್ಗೆ ಸಂಬಂಧಿಕರಿಗೆ ತಿಳಿಸಿದ್ದ ಮಾಲಾಶ್ರೀ. ಕಿರುಕುಳ ಸಹಿಸದೆ ವಿಷ ಸೇವಿಸಿದ್ದಾಳೆ. ಬಳಿಕ ಮಾಲಾಶ್ರೀಯನ್ನು ಅ.19 ರಂದು ಪತಿ ಆಶೋಕ್ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾನೆ. .ಆಸ್ಪತ್ರೆಗೆ ದಾಖಲಿಸಿದ್ದರೂ, ಮಾಲಾಶ್ರೀ ಕುಟುಂಬಸ್ಥರಿಂದ ವಿಷಯ ಮುಚ್ಚಿಟ್ಟು, ವಾಂತಿ- ಬೇಧಿಯಾಗಿದೆ ಎಂದು ಸುಳ್ಳು ಹೇಳಿದ್ದಾನೆ. 3 ದಿನವಾದರು ಕುಟುಂಬಸ್ಥರಿಗೆ ಯಾವುದೇ ವಿಷಯ ತಿಳಿಸದೇ ಮುಚ್ಚಿಟ್ಟಿದ್ದ. ಅ.22 ರ ಮಧ್ಯಾಹ್ನ ಮಾಲಾಶ್ರೀ ತಂದೆ ಕರೆ ಮಾಡಿದಾಗ ಐಸಿಯೂ ನಲ್ಲಿ ಇದ್ದಾಳೆ ಎಂದು ತಿಳಿಸಿದ್ದಾನೆ. ತಕ್ಷಣವೇ ಮಾಲಾಶ್ರೀ ಪೋಷಕರು ಮೆಗ್ಗಾನ್ ಆಸ್ಪತ್ರೆಗೆ ಬಂದಾಗ ಮಾಲಾಶ್ರೀ ಮೃತಪಟ್ಟಿರುವ ವಿಷಯ ತಿಳಿದು, ಅಘಾತಕ್ಕೆ ಒಳಾಗಾಗಿದ್ದಾರೆ.
ಮಾಲಾಶ್ರೀ ಪೋಷಕರು ಬರುತ್ತಿದ್ದಂತೆ ಪತಿ ಆಶೋಕ್ ಆಸ್ಪತ್ರೆಯಿಂದ ಪಾರಾರಿಯಾಗಿದ್ದಾನೆ. ಮಗಳ ಸಾವಿಗೆ ಪತಿ ಆಶೋಕ್ ಕಾರಣ ಎಂದು ಮಾಲಾಶ್ರೀ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿ. ಕುಂಸಿ ಪೊಲೀಸ್ ಠಾಣೆಯಲ್ಲಿ ಪತಿ ಆಶೋಕ್, ಅತ್ತೆ ನೀಲಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪತಿ ಆಶೋಕ್‌ನನ್ನು ವಶಕ್ಕೆ ಪಡೆದ ಕುಂಸಿ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.















