ಬೆಳಗಾವಿ : ಹೈವೋಲ್ಟೇಜ್ ವಿದ್ಯುತ್ ತಂತಿ ಸ್ಪರ್ಶಿಸಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಕಟಾವಿಗೆ ಬಂದಿದ್ದ ಸುಮಾರು ನಾಲ್ಕು ಎಕರೆ ಕಬ್ಬು ಬೆಳೆ ಸುಟ್ಟು ಭಸ್ಮವಾಗಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ನಡೆದಿದೆ.
ಆರ್ ದೇಶಪಾಂಡೆ ಎಂಬುವರಿಗೆ ಸೇರಿದ ಕಬ್ಬು ಬೆಳೆ ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣ ಬೂದಿಯಾಗಿದೆ. ಸರಿ ಸುಮಾರು ಎಂಟು ಲಕ್ಷ ರೂಪಾಯಿ ಬೆಳೆ ನಾಶವಾಗಿದ್ದು, ಹೆಸ್ಕಾಂ ದಿವ್ಯ ನಿರ್ಲಕ್ಷ್ಯದಿಂದಲೇ ಈ ಅವಘಡ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ.
ಕಷ್ಟ ಪಟ್ಟು ಬೆಳೆದ ರೈತನ ಮುಂದೆಯೇ ಕಬ್ಬು ಬೆಳೆ ಬೆಂಕಿ ಪಾಲಾಗಿದ್ದು, ಜಮೀನಿನ ಮುಂದೆ ನಿಂತು ರೈತ ಗೋಳಾಡಿದ್ದಾನೆ. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.