ಬೆಂಗಳೂರು : ಸಾಮಾಜಿಕ. ಶೈಕ್ಷಣಿಕ ಗಣತಿಗೆ ಕರ್ತವ್ಯ ಲೋಪ ಎಸಗಿದ 13 ಮಂದಿ ಸಿಬ್ಬಂದಿಗಳಿಗೆ ಜಯನಗರದ ವಿಧಾನಸಭಾ ಕ್ಷೇತ್ರದ ನಗರಪಾಲಿಕೆ ಜಂಟಿ ಆಯುಕ್ತರು ನೋಟೀಸ್ ನೀಡಿದ್ದಾರೆ.
ಸಿಬ್ಬಂದಿಗಳು ತಮ್ಮ ವ್ಯಾಪ್ತಿಯ ವಾರ್ಡಗಳಲ್ಲಿ 5 ಕ್ಕಿಂತ ಕಡಿಮೆ ಮನೆಗಳ ಗಣತಿ ಮಾಡಿರುವ ಆರೋಪ ಹಿನ್ನೆಲೆ ಕರ್ತವ್ಯ ಲೋಪ ಎಂದು ನೋಟಿಸ್ ಜಾರಿ ಮಾಡಲಾಗಿದೆ.

ಸರ್ಕಾರದ ಅದೇಶಕ್ಕೆ ಕಿಂಚ್ಚಿತ್ತು ಬೆಲೆ ನೀಡಿಲ್ಲ, ನಿಮ್ಮ ಕೆಳ ಹಂತದ ಗಣತಿದಾರರಿಗೆ ಸರಿಯಾದ ಮಾರ್ಗದರ್ಶನ ನೀಡಿಲ್ಲ, ಗಣತಿ ಕುಂಠಿತ ಕೊಂಡಿದೆ ಎಂದು ನೊಟೀಸ್ ಜಾರಿಗೊಳಿಸಲಾಗಿದ್ದು, ನೋಟೀಸ್ ತಲುಪಿದ 24 ಗಂಟೆಯಲ್ಲಿ ಉತ್ತರ ನೀಡಬೇಕು. ಇಲ್ಲದಿದ್ದಲ್ಲಿ ಶೈಕ್ಷಣಿಕ ಸಮೀಕ್ಷೆಯಲ್ಲಿ ವಿಳಂಬ ಧೋರಣೆ ಎಂದು ನಿಮ್ಮ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಅ.18ರ ಒಳಗಾಗಿ ಸಮೀಕ್ಷೆ ಪೂರ್ಣಗೊಳಿಸಲು ಸರ್ಕಾರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚನೆ ನೀಡಿದ್ದಾರೆ. ಶೇ.80 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸಮೀಕ್ಷೆ ಶೀಘ್ರವಾಗಿ ಪೂರ್ಣಗೊಳಿಸಲು ಆದೇಶ ಹೊರಡಿಸಿದ್ದರು