ಬೆಂಗಳೂರು: ಬೆಂಗಳೂರಿನ ಗುಂಡಿಗೆ ಮತ್ತೊಂದು ಜೀವ ಬಲಿಯಾಗಿದೆ. ಸ್ಕೂಲ್ ಬಸ್ಸೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪಿದ ದುರ್ಘಟನೆ ಮಹದೇವಪುರದ ಗುಂಜೂರಿನ ಡೀನ್ಸ್ ಅಕಾಡಮಿ ಬಳಿ ನಡೆದಿದೆ.

ಈ ಭಾಗದಲ್ಲಿ ಕಳೆದ ಎರೆಡು ವರ್ಷಗಳಿಂದ ಇದೇ ದುಸ್ಥಿತಿ ಇದೆ ಎಂದು ಸಿವಿಕ್ ಅಪೋಸಿಷನ್ ಫೋರಂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಜಿ ಬಿ ಎ, ಮಂಜುಳ ಲಿಂಬಾವಳಿಗೆ ಎಕ್ಸ್ ನಲ್ಲಿ ಟ್ಯಾಗ್ ಮಾಡಿ, ಪೋಸ್ಟ್ ಹಂಚಿಕೊಂಡು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.