ಮುಂಬೈ: ಹಾರ್ದಿಕ್ ಪಾಂಡ್ಯ ಅವರ ಹೊಸ ಗೆಳತಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರದಾಡುತ್ತಿದ್ದಂತೆ, ಈಕೆ ಯಾರು ಎನ್ನುವ ಪ್ರಶ್ನೆ ಬಂದಿದೆ.
ಮಹೀಕಾ ಅರ್ಥಶಾಸ್ತ್ರ ಮತ್ತು ಹಣಕಾಸಿನಲ್ಲಿ ಪದವಿ ಪಡೆದಿದ್ದಾರೆ. ಆದರೆ ಅವರು ಪೂರ್ಣ ಪ್ರಮಾಣದಲ್ಲಿ ಮಾಡೆಲಿಂಗ್ ಮತ್ತು ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತನಿಷ್ಕ್, ವಿವೋ ಮತ್ತು ಯುನಿಕ್ಲೋ ನಂತಹ ಬ್ರ್ಯಾಂಡ್‌ಗಳ ಜಾಹೀರಾತು ಪ್ರಚಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಶುಕ್ರವಾರ ಬೆಳಿಗ್ಗೆ , ಹಾರ್ದಿಕ್ ಮತ್ತು ಮಹಿಕಾ ಮುಂಬೈ ವಿಮಾನ ನಿಲ್ದಾಣಕ್ಕೆ 4.57 ಕೋಟಿ ರೂ. ಮೌಲ್ಯದ ತಮ್ಮ ಐಷಾರಾಮಿ ಹಳದಿ ಲ್ಯಾಂಬೋರ್ಘಿನಿ ಉರುಸ್ SE ಕಾರಿನಲ್ಲಿ ಆಗಮಿಸಿದಾಗ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಕಾರಿನಿಂದ ಮೊದಲು ಇಳಿದವರು ಕ್ರಿಕೆಟಿಗ, ಆದರೆ ಕೆಲವೇ ಕ್ಷಣಗಳ ನಂತರ, ಅವರ ಪ್ರೇಯಸಿ ಮಹೀಕಾ ಕೂಡ ಅವರನ್ನು ಹಿಂಬಾಲಿಸಿದರು. ಅಷ್ಟೇ ಅಲ್ಲದೆ ಹೊಸ ಲುಕ್ ನಲ್ಲಿ ಹಾರ್ದಿಕ್ ಕಾಣಿಸಿಕೊಂಡಿದ್ದಾರೆ. ಈ ಜೋಡಿ ಕಪ್ಪು ಉಡುಪಿನಲ್ಲಿ ಸಂಘಟಿತವಾಗಿ ಕಾಣಿಸಿಕೊಂಡಿದ್ದಾರೆ., ಟರ್ಮಿನಲ್ ಕಡೆಗೆ ಒಟ್ಟಿಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದ್ದು, ವಿದೇಶಿ ಪ್ರವಾಸ ಕೈಗೊಂಡಂತೆ ಕಾಣಿಸಿದೆ.