ಹಾಸನ: ವರ್ಷಕ್ಕೊಮ್ಮೆ ಮಾತ್ರ ತೆರಯುವ ಹಾಸನಾಂಬ ದೇವಿ ಭಕ್ತರಿಗೆ ದರ್ಶನ ನೀಡಲು ಸಜ್ಜಾಗಿದ್ದಾಳೆ. ಇಂದು ಮಧ್ಯಾಹ್ನ 12 ಗಂಟೆ ನಂತರ ಹಾಸನಾಂಬೆಯ ಗರ್ಭಗುಡಿಯ ಬಾಗಿಲು ತೆರೆಯಲಿದೆ.
ಪುರಾಣ ಪ್ರಸಿದ್ದ ಹಾಸನಾಂಬ ತಾಯಿಯ ಆಲಯವು ಇಂದಿನಿಂದ ಅ. 23 ರವರೆಗೆ ನಡೆಯಲಿದೆ. ಕೊನೆಯ ದಿನ ಹೊರತುಪಡಿಸಿ 13 ದಿನಗಳ ಕಾಲ ಸಾರ್ವಜನಿಕರಿಗೆ ಹಾಸನಾಂಬೆಯ ದರ್ಶನಕ್ಕೆ ಅವಕಾಶವಿರುತ್ತದೆ.
“ದರ್ಶನ ಸಮಯ ಹಾಗೂ ಟಿಕೆಟ್ ಬೆಲೆ ತಿಳಿದುಕೊಳ್ಳಿ”
ದೇವಿಯನ್ನು ದರ್ಶನ ಮಾಡಲು ಆನ್‌ಲೈನ್ ಅಥವಾ ಆಫ್‌ಲೈನ್ ಟಿಕೆಟ್ ಪಡೆಯಬಹುದು. ಇನ್ನು, ಈ ದೇವಾಲಯದ ಪ್ರವೇಶ ಸಮಯ ಹೀಗಿದೆ.
ಬೆಳಗಿನ ದರ್ಶನ ಬೆಳಿಗ್ಗೆ 06:00 – ಮಧ್ಯಾಹ್ನ 12:00
ಮಧ್ಯಾಹ್ನ ವಿರಾಮ ಮಧ್ಯಾಹ್ನ 12:00 – ಮಧ್ಯಾಹ್ನ 05:00
ಸಂಜೆ ದರ್ಶನ ಸಂಜೆ 05:00 – ರಾತ್ರಿ 08:00
ಪೂಜಾ ಸಮಯ ಬೆಳಿಗ್ಗೆ 06:00 – ಮಧ್ಯಾಹ್ನ 01:00