ಬೆಂಗಳೂರು : ‘ಬಿಗ್ ಬಾಸ್ ಕನ್ನಡ ಸೀಸನ್ 12’ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಕರ್ನಾಟಕ ರಾಜ್ಯ ಪರಿಸರ ನಿಯಂತ್ರಣ ಮಂಡಳಿ (KSPCB) ನೋಟಿಸ್ ನೀಡಿ ಈಗಾಗಲೇ ದೊಡ್ಮನೆಗೆ ಬೀಗ ಹಾಕಿದೆ. ಇದೀಗ ಈ ಬೆನ್ನಲ್ಲೇ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ನಿಂದಲೂ ಜಾಲಿವುಡ್ ಸ್ಟುಡಿಯೋಗೆ ಆಘಾತ ಎದುರಾಗಿದೆ.
ವಿದ್ಯುತ್ ಸ್ಥಾವರ ಸ್ಥಾಪನೆ ಬಗ್ಗೆ ಕಾರಣ ಕೇಳಿ ಬೆಸ್ಕಾಂ ನೋಟಿಸ್ ಜಾರಿ ಮಾಡಿದ್ದು, ಸ್ಥಳೀಯ ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಪಡೆದಿಲ್ಲ, ಅನುಮೋದನೆ ಪಡೆಯದೇ ವಿದ್ಯುತ್ ಸ್ಥಾವರ ಸ್ಥಾಪಿಸಿರೋದು ಹೇಗೆ ಎಂದು ಬೆಸ್ಕಾಂ ಅಧಿಕಾರಿಗಳು ವೆಲ್ಸ್ ಸ್ಟುಡಿಯೋ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದ್ದಾರೆ.
ಈ ಸಂಬಂಧ ನೋಟಿಸ್ ನೀಡಲು ಮುಂದಾದ ಬೆಸ್ಕಾಂ ಇಲಾಖೆ, ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಬಗ್ಗೆ ನೋಟಿಸ್ ನೀಡಲು ಜಾಲಿವುಡ್ ಸ್ಟುಡಿಯೋಗೆ ಬೆಸ್ಕಾಂ ಅಧಿಕಾರಿಗಳು ತೆರಳಿದ್ದಾರೆ. ಬಿಡದಿ ಎಇಇ ಮೋಹಿತಾ ಅವರು ನೋಟಿಸ್ ನೀಡಲು ಹೋಗಿದ್ದು, ಅಧಿಕಾರಿಗಳು ನೋಟಿಸ್ ನೀಡಿ ತಕ್ಷಣ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಿದ್ದಾರೆ.
ಆದ್ರೆ, ನೋಟಿಸ್ ಸ್ವೀಕರಿಸಲು ಜಾಲಿವುಡ್ ಸ್ಟುಡಿಯೋ ಆಡಳಿತ ಮಂಡಳಿ ಮುಂದಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಎಲ್ಲಾ ಗೇಟ್ ಕ್ಲೋಸ್ ಹಿನ್ನಲೆ ನೋಟಿಸ್ ನೀಡದೇ ಅಧಿಕಾರಿಗಳು ವಾಪಸ್ ತೆರಳಿದ್ದಾರೆ ಎಂದು ತಿಳಿದುಬಂದಿದೆ.