ಬೆಂಗಳೂರು : ದೇಶದ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿರುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ (UGC NET December 2025) ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಚಾಲನೆ ನೀಡಿದೆ. ಜ್ಯೂನಿಯರ್ ರಿಸರ್ಚ್ ಫೆಲೋಶಿಪ್ (ಜೆಆರ್ ಎಫ್), ಸಹಾಯಕ ಪ್ರಾಧ್ಯಾಪಕ ಹುದ್ದೆ ಹಾಗೂ ಪಿಎಚ್.ಡಿಗೆ ಪ್ರವೇಶ ಪಡೆಯಲು ನೆಟ್ ಪರೀಕ್ಷೆಯು ನಿರ್ಣಾಯಕವಾಗಿರುವ ಕಾರಣ ಆಸಕ್ತರು ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಶೇ.55ರಷ್ಟು ಅಂಕಗಳನ್ನು ಪಡೆದವರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಡಿಸೆಂಬರ್ ನಲ್ಲಿ ಪರೀಕ್ಷೆ ನಡೆಯಲಿದ್ದು, ಶೀಘ್ರವೇ ದಿನಾಂಕ ಘೋಷಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಜನರಲ್ ಅಭ್ಯರ್ಥಿಗಳಿಗೆ 1,150 ರೂಪಾಯಿ ನೋಂದಣಿ ಶುಲ್ಕವಿದೆ. ಇಡಬ್ಲ್ಯೂಎಸ್, ಒಬಿಸಿಯವರಿಗೆ 600 ರೂಪಾಯಿ ಹಾಗೂ ಎಸ್ಸಿ, ಎಸ್ಸಿ, ಬಿಡಬ್ಲ್ಯೂಬಿಡಿ, ತೃತೀಯ ಲಿಂಗಿಗಳಿಗೆ 325 ರೂಪಾಯಿ ನೋಂದಣಿ ಶುಲ್ಕವಿದೆ.
ಪರೀಕ್ಷೆ ದಿನಾಂಕ ಪ್ರಕಟ ಸೇರಿ ಯಾವುದೇ ಮಾಹಿತಿಗಾಗಿ ಅಭ್ಯರ್ಥಿಗಳು ಎನ್ ಟಿ ಎ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಯು ದೇಶಾದ್ಯಂತ ನಡೆಯಲಿದೆ. ಸುಮಾರು 85 ವಿಷಯಗಳ ಬಗ್ಗೆ ಬಹು ಆಯ್ಕೆಯ ಪ್ರಶ್ನೆಗಳನ್ನು ಕೇಳುವ ಮೂಲಕ ಪರೀಕ್ಷೆ ನಡೆಸಲಾಗುತ್ತದೆ.
ಪ್ರಮುಖ ದಿನಾಂಕಗಳು :
- ಅಪ್ಲಿಕೇಶನ್ ಸಲ್ಲಿಸಲು ಆರಂಭ, ಕೊನೆಯ ದಿನಾಂಕ: ಅಕ್ಟೋಬರ್ 7- ನವೆಂಬರ್ 7
- ಆನ್ ಲೈನ್ ಪೇಮೆಂಟ್ ಮಾಡಲು ಕೊನೆಯ ದಿನಾಂಕ: ನವೆಂಬರ್ 7, ರಾತ್ರಿ 11.50ರವರೆಗೆ
- ಅಪ್ಲಿಕೇಶನ್ ತಿದ್ದುಪಡಿ ದಿನಾಂಕ: ನವೆಂಬರ್ 10ರಿಂದ 12, ರಾತ್ರಿ 11.50ರವರೆಗೆ
ನೋಂದಣಿ ಮಾಡಿಕೊಳ್ಳುವುದು ಹೇಗೆ?
- ಮೊದಲಿಗೆ ಅಧಿಕೃತ ವೆಬ್ ಸೈಟ್ ಆಗಿರುವ ugcnet.nta.nic.in. ಗೆ ಭೇಟಿ ನೀಡಿ
- ಹೋಮ್ ಪೇಜ್ ನಲ್ಲಿ ರಿಜಿಸ್ಟ್ರೇಷನ್ ಎಂಬ ಆಪ್ಶನ್ ಮೇಲೆ ಕ್ಲಿಕ್ ಮಾಡಿ
- ನೋಂದಣಿ ಪ್ರಕ್ರಿಯೆ ಮುಗಿಸಿ, ಲಾಗ್ ಇನ್ ಆಗಿ
- ಯಾವುದೇ ತಪ್ಪುಗಳಿಲ್ಲದೆ ಅಪ್ಲಿಕೇಷನ್ ಭರ್ತಿ ಮಾಡಿ
- ಶುಲ್ಕವನ್ನು ಪಾವತಿಸಿದ ಬಳಿಕ ಸಬ್ ಮಿಟ್ ಮೇಲೆ ಕ್ಲಿಕ್ ಮಾಡಿ
- ಫ್ಯೂಚರ್ ರೆಫರೆನ್ಸಿಗಾಗಿ ಅಪ್ಲಿಕೇಷನ್ ನಮೂನೆಯ ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ