ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ವಿವಿಧ ಅಸಿಸ್ಟಂಟ್ ಪ್ರೊಫೆಸರ್ ಹಾಗೂ ಪ್ಲೇಸ್ ಮೆಂಟ್ ಆಫೀಸರ್ ಹುದ್ದೆಗಳನ್ನು ಭರ್ತಿ (Mysore University Recruitment 2025) ಮಾಡಿಕೊಳ್ಳಲಾಗುತ್ತಿದೆ. ನೇಮಕಾತಿ ಕುರಿತ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆಗಳು: ಮೈಸೂರು ವಿಶ್ವವಿದ್ಯಾಲಯ
ಒಟ್ಟು ಹುದ್ದೆಗಳು: ವಿವಿಧ
ನೇಮಕಾತಿ ವಿಧಾನ: ಸಂದರ್ಶನ
ಉದ್ಯೋಗ ಸ್ಥಳ: ಮೈಸೂರು
ಸಂದರ್ಶನದ ದಿನಾಂಕ: ಅಕ್ಟೋಬರ್ 10
ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು ಅಥವಾ ಮಂಡಳಿಗಳಿಂದ ಡಿಪ್ಲೊಮಾ, ಸ್ನಾತಕೋತ್ತರ ಪದವಿ, ಬಿಇ ಅಥವಾ ಬಿ.ಟೆಕ್, ಎಂಇ ಅಥವಾ ಎಂ.ಟೆಕ್, ಎಂಸಿಎ, ಎಂಬಿಎ, ಪಿಎಚ್.ಡಿ ಮುಗಿಸಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಗರಿಷ್ಠ 65 ವರ್ಷದೊಳಗಿನವರು ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.
ನೇಮಕಾತಿ ಹೊಂದಿದವರಿಗೆ ಮಾಸಿಕ 35 ಸಾವಿರ ರೂಪಾಯಿ ಸಂಬಳ ನೀಡಲಾಗುತ್ತದೆ. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿಯವರಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಆಸಕ್ತಿ ಇರುವವರು uni-mysore.ac.in ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಬಳಿಕ ನಿಗದಿತ ದಿನಾಂಕದಂದು ಅಗತ್ಯ ದಾಖಲೆಗೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.
ಸಂದರ್ಶನ ನಡೆಯುವ ಸ್ಥಳ:
Syndicate Chamber, Crawford Hall, University of Mysore, Mysuru, Karnataka