ಶಿವಮೊಗ್ಗ: ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷಾ ಕಾರ್ಯ ಈಗಾಗಲೇ ಆರಂಭವಾಗಿದೆ, ಅದರಂತೆ ಮಲೆನಾಡು ಭಾಗದಲ್ಲಿ ಗಣತಿ ನಡೆಸಿದ್ದು, ಅಂತರ್ಜಾಲದ ಸಮಸ್ಯೆಯಿಂದ ಅಧಿಕಾರಿಗಳು ಪರದಾಡುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮಣಕಂದೂರು ಹಳ್ಳಿಯಲ್ಲಿ ನೆಟ್ವರ್ಕ್ ಇಲ್ಲದೆ ಅಧಿಕಾರಿಗಳು ಹಾಗೂ ಊರ ಜನರು ದೂರದ ಬೆಟ್ಟದಲ್ಲಿಯೇ ದಿನವಿಡೀ ಕುಳಿತ್ತಿದ್ದಾರೆ. ಸಮೀಕ್ಷೆಗೆ ಜನ ಸಹಕಾರ ನೀಡಿದರೂ ಅಂತರ್ಜಾಲದ ಸಮಸ್ಯೆ ಎದುರಾಗುತ್ತಲೇ ಇದೆ. ಸರ್ಕಾರ ಮೊದಲು ಸೂಕ್ತ ನೆಟ್ವರ್ಕ್ ಸೌಲಭ್ಯ ನೀಡಲಿ ಎಂದು ಗ್ರಾಮದ ಜನರು ಒತ್ತಾಯಿಸುತ್ತಿದ್ದಾರೆ.
ಈ ಸಮಸ್ಯೆ ಒಂದು ಕಡೆ ಆದರೆ ಮತ್ತೊಂದೆಡೆ ಕುಡಿಯಲು ನೀರಿಲ್ಲದೆ, ಮಳೆ ಗಾಳಿಯಲ್ಲಿ ಗಣತಿ ಕಾರ್ಯದಲ್ಲಿ ಅಧಿಕಾರಿಗಳು ಪೇಚಾಡುತ್ತಿದ್ದಾರೆ. ಇದರಿಂದ ಅಧಿಕಾರಿಗಳಿಗೆ ಊರ ಜನರು ಸಹಕರಿಸಿದ್ದು, ಸರ್ಕಾರ ಸೌಲಭ್ಯ ಒದಗಿಸುವಂತೆ ಮನವಿ ಮಾಡುತ್ತಿದ್ದಾರೆ.