ಬೆಂಗಳೂರು: ದೇಶಾದ್ಯಂತ ಹಬ್ಬಗಳ ಮಾಸವಾಗಿರುವ ಅಕ್ಟೋಬರ್ ನಲ್ಲಿ ಶಾಲೆ-ಕಾಲೇಜುಗಳಿಗೆ ಮಾತ್ರವಲ್ಲ, ಬ್ಯಾಂಕುಗಳಿಗೂ ಹೆಚ್ಚಿನ ರಜೆ ಇರುತ್ತವೆ. ಹಾಗಾಗಿ, ಅಕ್ಟೋಬರ್ ನಲ್ಲಿ 21 ದಿನ ಬ್ಯಾಂಕುಗಳಿಗೆ ರಜೆ ಇರಲಿದೆ. ಶನಿವಾರ, ಭಾನುವಾರ ಸೇರಿ, ಕೆಲ ರಾಜ್ಯಗಳಲ್ಲಿ ಹಬ್ಬಗಳು, ಸಾರ್ವತ್ರಿಕ ರಜೆಗಳು ಸೇರಿ 21 ದಿನ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ. ಹಾಗಾಗಿ, ಇಲ್ಲಿ ನೀಡಿರುವ ಪಟ್ಟಿಯನ್ನು ನೋಡಿಕೊಂಡು ಗ್ರಾಹಕರು ಬ್ಯಾಂಕ್ ಗಳಿಗೆ ತೆರಳುವುದು ಒಳಿತು.
ಇಲ್ಲಿದೆ ಬ್ಯಾಂಕುಗಳ ರಜೆ ಪಟ್ಟಿ
ಅಕ್ಟೋಬರ್ 1- ಬುಧವಾರ: ಮಹಾನವಮಿ (ಬಹುತೇಕ ರಾಜ್ಯಗಳಲ್ಲಿ ರಜೆ)
ಅಕ್ಟೋಬರ್ 2- ಗುರುವಾರ: ಗಾಂಧಿ ಜಯಂತಿ, ವಿಜಯದಶಮಿ (ಸಾರ್ವತ್ರಿಕ ರಜೆ)
ಅಕ್ಟೋಬರ್ 3: ಶುಕ್ರವಾರ: ದುರ್ಗಾ ಪೂಜೆ (ಸಿಕ್ಕಿಂ)
ಅಕ್ಟೋಬರ್ 4: ಶನಿವಾರ: ದುರ್ಗಾ ಪೂಜೆ (ಸಿಕ್ಕಿಂ)
ಅಕ್ಟೋಬರ್ 5: ಭಾನುವಾರದ ರಜೆ
ಅಕ್ಟೋಬರ್ 6- ಸೋಮವಾರ: ಲಕ್ಷ್ಮೀ ಪೂಜೆ (ತ್ರಿಪುರ, ಪಶ್ಚಿಮ ಬಂಗಾಳ)
ಅಕ್ಟೋಬರ್ 7- ಮಂಗಳವಾರ: ವಾಲ್ಮೀಕಿ ಜಯಂತಿ (ಕೆಲ ರಾಜ್ಯಗಳಲ್ಲಿ ರಜೆ)
ಅಕ್ಟೋಬರ್ 10- ಶುಕ್ರವಾರ: ಕರ್ವಾ ಚೌತ್ (ಹಿಮಾಚಲ ಪ್ರದೇಶದಲ್ಲಿ ರಜೆ)
ಅಕ್ಟೋಬರ್ 11: 2ನೇ ಶನಿವಾರದ ರಜೆ
ಅಕ್ಟೋಬರ್ 12: ಭಾನುವಾರದ ರಜೆ
ಅಕ್ಟೋಬರ್ 18- ಶನಿವಾರ: ಕಟಿ ಬಿಹು (ಅಸ್ಸಾಂನಲ್ಲಿ ರಜೆ)
ಅಕ್ಟೋಬರ್ 19: ಭಾನುವಾರದ ರಜೆ
ಅಕ್ಟೋಬರ್ 20- ಸೋಮವಾರ: ದೀಪಾವಳಿ, ಕಾಳಿ ಪೂಜೆ (ಬಹುತೇಕ ರಾಜ್ಯಗಳಲ್ಲಿ ರಜೆ)
ಅಕ್ಟೋಬರ್ 2- ಮಂಗಳವಾರ: ದೀಪಾವಳಿ ಅಮಾವಾಸ್ಯೆ, ಗೋವರ್ದನ ಪೂಜೆ (ಮಹಾರಾಷ್ಟ್ರ, ಒಡಿಶಾ ಸೇರಿ ಕೆಲ ರಾಜ್ಯಗಳಲ್ಲಿ ರಜೆ)
ಅಕ್ಟೋಬರ್ 22- ಬುಧವಾರ: ದೀಪಾವಳಿ ಲಕ್ಷ್ಮೀ ಪೂಜೆ, ಬಲಿಪಾಡ್ಯಮಿ (ಬಹುತೇಕ ರಾಜ್ಯಗಳಲ್ಲಿ ರಜೆ)
ಅಕ್ಟೋಬರ್ 23- ಗುರುವಾರ: ಭಾಯಿ ದೂಜ್, ಲಕ್ಷ್ಮೀ ಪೂಜೆ, ಚಿತ್ರಗುಪ್ತ ಪೂಜೆ
ಅಕ್ಟೋಬರ್ 25: 4ನೇ ಶನಿವಾರದ ರಜೆ
ಅಕ್ಟೋಬರ್ 26: ಭಾನುವಾರದ ರಜೆ
ಅಕ್ಟೋಬರ್ 27- ಸೋಮವಾರ: ಛಾತ್ ಪೂಜೆ (ಬಂಗಾಳ, ಬಿಹಾರ, ಜಾರ್ಖಂಡ್)
ಅಕ್ಟೋಬರ್ 28- ಮಂಗಳವಾರ: ಛಾತ್ ಪೂಜೆ (ಬಂಗಾಳ, ಬಿಹಾರ, ಜಾರ್ಖಂಡ್ )
ಅಕ್ಟೋಬರ್ 31- ಶುಕ್ರವಾರ: ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ (ಗುಜರಾತ್)