ಬೆಂಗಳೂರು: ಚಂದನವನದಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯ ಬೇಡಿಕೆಯ ಪರ್ವ ಶುರುವಾಗಿದ್ದು, ವಿಷ್ಣು, ಅಂಬಿ, ಸರೋಜಾದೇವಿ ನಂತರ ಹಿರಿಯ ನಟಿ ಲೀಲಾವತಿಗೂ ಕರ್ನಾಟಕ ರತ್ನ ನೀಡುವಂತೆ ಕನ್ನಡಿಗರ ರಕ್ಷಣಾ ವೇದಿಕೆ ಮನವಿ ಮಾಡಿದೆ.
ದಿವಂಗತ ಲೀಲಾವತಿ ಸಮಾಧಿ ಬಳಿ ಪೂಜೆ ಸಲ್ಲಿಸಿದ ಅಭಿಮಾನಿಗಳು ಲೀಲಾವತಿ ಅವರಿಗೂ ಕರ್ನಾಟಕ ರತ್ನ ಪ್ರಶಸ್ತಿ ಕೊಡುವಂತೆ ಸಿಎಂ ಸಿದ್ದರಾಮಯ್ಯಗೆ ಪತ್ರದ ಮೂಲಕ ತಿಳಿಸಿದ್ದಾರೆ.
ನಟಿ ಲೀಲಾವತಿ ಅವರು 650ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ವಂತ ಖರ್ಚಿನಲ್ಲಿ ಹೆರಿಗೆ ಆಸ್ಪತ್ರೆಯನ್ನು ನಿರ್ಮಿಸಿದ್ದಾರೆ ಹಾಗೂ ಹಿರಿಯ ಕಲಾವಿದರಿಗೆ ಮಾಸಾಶನ ನೀಡಿದ್ದಾರೆ. ಲೀಲಾವತಿ ಒಬ್ಬ ಮಾನವೀಯ ಮೌಲ್ಯವಿರುವ ನಟಿಯಾಗಿದ್ದರು. ಅವರಿಗೆ ಕರ್ನಾಟಕ ರತ್ನ ಸಿಗಬೇಕೆಂಬುವುದು ನಮ್ಮೆಲ್ಲರ ಆಸೆಯಾಗಿದೆ ಎಂದು ತಿಳಿಸಿದ್ದಾರೆ.