ಆನೇಕಲ್: ಪತ್ನಿಯನ್ನು ಕೊಂದಿದ್ದ ಪತಿಗೆ ಆನೇಕಲ್‌ನ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
2017ರಲ್ಲಿ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಶ್ಯಾನಭೋಗನಹಳ್ಳಿಯಲ್ಲಿ ಕೊಲೆ ನಡೆದಿದ್ದು, ಪತಿ ಇನಾಯತ್ ಪಾಷಾ ಎಂಬಾತ ಪತ್ನಿ ಸುಮಯಾ ಬಾನುಳನ್ನು ಕೆಲಸಕ್ಕೆ ಹೋಗಿ ಹಣ ತಂದು ಕೊಡು ಎಂದು ಪೀಡಿಸುತ್ತಿದ್ದ ಇದಕ್ಕೆ ಒಪ್ಪದ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ.
ಪ್ರಕರಣ ದಾಖಲಿಸಿಕೊಂಡ ಬನ್ನೇರುಘಟ್ಟ ಪೊಲೀಸರು, ಇನ್ಸ್‌ಪೆಕ್ಟರ್ ಎಸ್.ಕೆ.ಮಾಲತೀಶ್ ನೇತೃತ್ವದಲ್ಲಿ ತನಿಖೆ ನಡೆಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಸಂಬಂಧ ಆನೇಕಲ್‌ನ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಸೋಮಶೇಖರ್ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ಜೊತೆಗೆ 50,000 ರೂಪಾಯಿ ದಂಡ ವಿಧಿಸಿದ್ದಾರೆ.