ಬೆಂಗಳೂರು: ಕಳ್ಳ ಮತ್ತೊಬ್ಬನನ್ನು ಕಳ್ಳ ಎಂದು ಹೇಳಿ ತಪ್ಪಿಸಿಕೊಳ್ಳಲು ಹೊರಟಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ ಕಳ್ಳತನ ಆರೋಪದ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಛಲವಾದಿ, 70ರ ದಶಕದಲ್ಲಿ ಜೆಪಿ ನೇತೃತ್ವದಲ್ಲಿ ಚಳುವಳಿ ಯಾಕೆ ಆಯಿತು ಎಂದು ರಾಹುಲ್ ಗಾಂಧಿಗೆ ಕೇಳಿ ಎಂದು ಪ್ರಶ್ನೆ ಮಾಡಿ, ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಲು ಕಾರಣ ಮತ ಕಳ್ಳತನ, ಈ ಕುರಿತು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಬ್ಯಾಲೆಟ್ ಬ್ಯಾಕ್ಸ್ ಗಳನ್ನೇ ಕಳ್ಳತನ ಮಾಡಿದವರು ಕಾಂಗ್ರೆಸ್ ನಲ್ಲಿ ಇದ್ದಾರೆ ಎಂದು ಆರೋಪಿಸಿದ್ದಾರೆ.
ಈಗ ಪಾರದರ್ಶಕ ಮತದಾನ ನಡೆಯುತ್ತಿದೆ. ಮತಕಳ್ಳತನ ಎಂದು ಮಾತನಾಡುತ್ತಿರುವವರೆ ನಿಜವಾದ ಕಳ್ಳರು. ಆರೋಪ ಮಾಡಿದರೆ ಜನ ನಮ್ಮನ್ನು ನಂಬುತ್ತಾರೆ ಎಂದು ರಾಹುಲ್ ಗಾಂಧಿಗೆ ಭ್ರಮೆ ಇಡೀ ಕಾಂಗ್ರೆಸ್ ನವರು ಕಳ್ಳರು ಅವರ ಆರೋಪ ಊರ್ಜಿತ ಆಗುವುದಿಲ್ಲ ಎಂದು ಹೇಳಿದ್ದಾರೆ.



















