ಬೆಂಗಳೂರು: ಡಿಗ್ರಿಯೋ, ಮಾಸ್ಟರ್ ಡಿಗ್ರಿಯೋ ಮುಗಿಸಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದರೆ ಕಾರ್ಯಾನುಭವ ಕೇಳುತ್ತಾರೆ. ಆದರೆ, ಯಾವುದೇ ಎಕ್ಸ್ ಪೀರಿಯನ್ಸ್ ಇಲ್ಲದೆ, ಅಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸಿದರೆ, ಬಳಿಕ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಹಿಡಿಯಲು ಅನುಕೂಲವಾಗುತ್ತದೆ. ಹೀಗೆ, ಡಿಗ್ರಿ ಸೇರಿ ವಿವಿಧ ಕೋರ್ಸ್ ಮುಗಿಸಿದವರಿಗೆ ಈಗ ಅಪ್ರೆಂಟಿಸ್ ಹುದ್ದೆಗಳು ಕೈಬೀಸಿ ಕರೆಯುತ್ತಿವೆ. ಹೌದು, ಕೇಂದ್ರ ಸರ್ಕಾರದ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL Recruitment 2025) ಸಂಸ್ಥೆಯಲ್ಲಿ 1,149 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ: ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL)
ಹುದ್ದೆಗಳು: 1,149
ಹುದ್ದೆ ಹೆಸರು: ಅಪ್ರೆಂಟಿಸ್
ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಅಕ್ಟೋಬರ್ 06
ಉದ್ಯೋಗ ಸ್ಥಳ: ದೇಶಾದ್ಯಂತ
ಐಟಿಐ ಎಲೆಕ್ಟ್ರಿಶಿಯನ್, ಡಿಪ್ಲೋಮಾ, ಎಚ್ ಆರ್ ಎಕ್ಸಿಕ್ಯೂಟಿವ್, ಪಿಆರ್ ಅಸಿಸ್ಟಂಟ್, ಲೈಬ್ರರಿ ಪ್ರೊಫೆಷನಲ್ ಸೇರಿ ಹಲವು ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಐಟಿಐ, ಡಿಪ್ಲೋಮಾ, ಬಿಎಸ್ಸಿ, ಬಿಇ, ಬಿಟೆಕ್, ಬಿಎ, ಎಂಬಿಎ, ಎಲ್ ಎಲ್ ಬಿ ಸೇರಿ ಹಲವು ಕೋರ್ಸ್ ಗಳನ್ನು ಮುಗಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರಿಗೆ ಯಾವುದೇ ಶುಲ್ಕವನ್ನು ನಿಗದಿಪಡಿಸಿಲ್ಲ. ನೇಮಕಾತಿ ಹೊಂದಿದವರಿಗೆ ಆಯಾ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 17,500 ರೂಪಾಯಿ ಸ್ಟೈಪೆಂಡ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ ಅಧಿಕೃತ ವೆಬ್ಸೈಟ್ powergridindia.com ಗೆ ಭೇಟಿ ನೀಡಬೇಕು
ಅಪ್ರೆಂಟಿಸ್ ವಿಭಾಗವನ್ನು ಆಯ್ಕೆಮಾಡಿಕೊಳ್ಳಬೇಕು
ಹುದ್ದೆಗಳ ಕುರಿತ ಅಧಿಸೂಚನೆ ಓದಬೇಕು
ಆನ್ ಲೈನ್ ಅರ್ಜಿ ನಮೂನೆಯ ಲಿಂಕ್ ತೆರೆಯಬೇಕು
ಅರ್ಜಿ ನಮೂನೆಯನ್ನು ತಪ್ಪಿಲ್ಲದೆ ಭರ್ತಿ ಮಾಡಬೇಕು
ಆನ್ ಲೈನ್ ಮೂಲಕವೇ ಶುಲ್ಕ ಪಾವತಿ ಮಾಡಬೇಕು
ಅರ್ಜಿ ಸಲ್ಲಿಸಿ, ಸಬ್ ಮಿಟ್ ಮಾಡಿದ ಅರ್ಜಿಯ ಪ್ರತಿಯನ್ನು ಪ್ರಿಂಟ್ ತೆಗೆದಿಟ್ಟುಕೊಳ್ಳಬೇಕು