ಮಂಗಳೂರು: ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ವಿರುದ್ದ ವೆಂಕಪ್ಪ ಕೋಟ್ಯಾನ್ ಎಂಬವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
2012ರಲ್ಲಿ ಕೊಲೆಯಾದ ಸೌಜನ್ಯಳನ್ನು ಆಕೆಯ ಮಾವ ವಿಠ್ಠಲಗೌಡ ಕೊಲೆ ಮಾಡಿದ್ದಾನೆ ಎಂದು ಸ್ನೇಹಮಯಿ ಕೃಷ್ಣ ಆರೋಪ ಮಾಡಿದ್ದರು. ಈ ಹಿನ್ನಲೆ ಸೌಜನ್ಯಳಿಗೆ ನ್ಯಾಯ ಒದಗಿದುವ ಹೋರಾಟದ ದಾರಿಯನ್ನು ತಪ್ಪಿಸುವ ದುರುದ್ದೇಶವನ್ನು ಸ್ನೇಹಮಯಿ ಕೃಷ್ಣ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಮೈಸೂರಿನಿಂದ ಕರೆಸಿ ಈ ರೀತಿ ಹೇಳಿಕೆ ನೀಡಿರುವುದರ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ಯಾಗಬೇಕು ಎಂದು ಒತ್ತಾಯಿಸಿ, ಸ್ನೇಹಮಯಿ ಕೃಷ್ಣರನ್ನು ವಿಚಾರಣೆ ನಡೆಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.