ಚಿತ್ರದುರ್ಗ : ರಾಜ್ಯದಲ್ಲಿ ಈದ್ ಮಿಲಾದ್ ಗೆ ಡಿಜೆ ಅನುಮತಿ ಕೊಡುತ್ತಾರೆ. ಈದ್ ಮಿಲಾದ್ ನಲ್ಲಿ ಪಾಕಿಸ್ತಾನ ಧ್ವಜ ಹಾರಿಸಲು, ಪಾಕಿಸ್ತಾನ ಪರ ಘೋಷಣೆ ಕೂಗಲು ಅವಕಾಶ ಕೊಡುತ್ತಾರೆ. ಈದ್ ಮಿಲಾದ್ ನಲ್ಲಿ ಪ್ಯಾಲೆಸ್ತೈನ್ ಧ್ವಜ ಹಾರಿಸಲು ಕೊಡುತ್ತಾರೆ. 15 ನಿಮಿಷ ಪೊಲೀಸರನ್ನು ಹಿಂದಕ್ಕೆ ಸರಿಸಿ, ಹಿಂದೂಗಳನ್ನು ಮುಗಿಸಿ ಬಿಡುತ್ತೇವೆ ಎನ್ನುವ ಕ್ಯಾಸೆಟ್ ಗೆ ಅನುಮತಿ ನೀಡುತ್ತಾರೆ. ಸುಪ್ರೀಂ ಕೋರ್ಟ್ ಆದೇಶ ಇದ್ರೂ ಅವರು 5 ಬಾರಿ ಒದರುತ್ತಾರೆ (ಮುಸ್ಲೀಂ ಬಾಂಗ್). ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇದು ಸಾಬರ ಸರ್ಕಾರ ಆಗಿದೆ. ದುರ್ದೈವಕ್ಕೆ ಕರ್ನಾಟಕದಲ್ಲಿ ಮೊಘಲರ ದರ್ಬಾರ್ ನಡೆಯುತ್ತಿದೆ. ರಾಜ್ಯದಲ್ಲಿ ಔರಂಗಜೇಬನ ಆಡಲಿತವಿದ್ದಂತಿದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರ ಹಾಕಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಇಲ್ಲಿ ಹಿಂದೂ, ದಲಿತ, ಹಿಂದುಳಿದವರಿಗೆ ಸರ್ಕಾರ ರಕ್ಷಣೆ ನೀಡುತ್ತಿಲ್ಲ. ರಾಜ್ಯದ ಎಲ್ಲಾ ಕಡೆ ಡಿಜೆಗೆ ಅನುಮತಿ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ, ಎಸ್ಪಿ, ಡಿಸಿ ಚಿತ್ರದುರ್ಗ ಈ ರಾಜ್ಯದಲ್ಲಿ ಇದೆಯೋ ಇಲ್ಲವೋ ಎಂದು ಜನರಿಗೆ ಹೇಳಬೇಕು. ಉಸ್ತುವಾರಿ ಸಚಿವರು ಹಿಂದೂಗಳು ಓಟು, ಸಾಬರ ಓಟು ಬಿದ್ದ ಮೇಲೆಯೇ ಆರಿಸಿ ಬಂದಿದ್ಧಾರೆ. ಸಾಬರು ಮಾತ್ರ ಬೇಕು ಅಂದರೆ, ಮುಂದಿನ ಸಲ ಅವರಷ್ಟೇ ಓಟು ಹಾಕಲಿ. ಜಾತ್ಯಾತೀತ ಅಂದರೆ ಎಲ್ಲರಿಗೂ ಸ್ಪಂದಿಸುವ ಸರ್ಕಾರ ಇರಬೇಕು. ಬರೀ ಸಾಬರಿಗೆ ಸ್ಪಂದಿಸುವ ಸರ್ಕಾರ ಇರಬಾರದು. ಶಾಂತಿ ಸುವ್ಯವಸ್ಥೆ ಹಿನ್ನೆಲೆ ಡಿಜೆ ನಿರಾಕರಣೆ ವಿಚಾರಕ್ಕೆ ಪ್ರತಿಕ್ರಿಯೆ. ಪಾಕಿಸ್ತಾನ ಧ್ವಜ ಹಾರಿಸುತ್ತಾರೆ ಎಂದು ಕಿಡಿ ಕಾರಿದ್ದಾರೆ.
ಭದ್ರಾವತಿಯಲ್ಲಿ ಏನಾಯಿತು. ಮದ್ದೂರಲ್ಲಿ ಮಸೀದಿ ಮೇಲೆ ನಿಂತು ಕಲ್ಲು ಹೊಡೆದರು. ಅದೇನಾಯಿತು ? ರಾಜ್ಯದಲ್ಲಿ ಎಲ್ಲಾದರೂ ಈದ್ ಮಿಲಾದ್ ಮೆರವಣಿಗೆ ಮೇಲೆ ಹಿಂದೂಗಳು ಕಲ್ಲು ತೂರಿದ್ದಾರೆಯೇ ? “ಇಂಥಹ ಏನೇ ಹಲ್ಕಾ ಕೆಲಸ ಮಾಡುವವರು ಅವರೇ“. ಕಲ್ಲು ತೂರುವುದು, ಉಗುಳುವುದು ಆ ಸಂಸ್ಕೃತಿ ನಮ್ಮ ಹಿಂದೂಗಳಲ್ಲಿಲ್ಲ. ಇದನ್ನು ಸಹಿಸಿಕೊಂಡಿದ್ದೇವೆ ಎಂದರೆ ನಾವು ಅಸಮರ್ಥರು ಎಂದಲ್ಲ. ನಾವು ಸಿಡಿದೆದ್ದರೆ ಇವು ಯಾವುವೂ ಉಳಿಯುವುದಿಲ್ಲ. ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಕಾನೂನಿ ಆಧಾರದ ಮೇಲೆ ಕೆಲಸ ಮಾಡಬೇಕು. ಚಿತ್ರದುರ್ಗ ಜಿಲ್ಲೆಗೆ ಬೇರೆ ಕಾನೂನು ಇದೆಯೇ ? ಚಿತ್ರದುರ್ಗದ ಗಣೇಶ ಶೋಭಾಯಾತ್ರೆಗೆ ಡಿಜೆ ನಿರಾಕರಣೆ ಮಾಡಿರುವುದು ಯಾಕೆ ? ಇದು ಬದಲಾಗದಿದ್ದರೇ, ಮುಂದಿನ ದಿನಗಳಲ್ಲಿ ಜನರು ಒಪ್ಪುವುದಿಲ್ಲ. ಹಿಂದೂ ಮೆರವಣಿಗೆ ಹೋಗುವ ಜಾಗಗಳ ಮಸೀದಿಗಳಲ್ಲಿ ಪೊಲೀಸರು ಪರಿಶೀಲನೆ ಮಾಡಬೇಕು. ಇಂಥಹ ಘಟನೆಗಳಿಗೆ ಅಲ್ಲಿನ ಮೌಲ್ವಿಯನ್ನು ಜವಾಬ್ದಾರಿ ಮಾಡಬೇಕು. ಬರೀ ಶಾಂತಿ ಸಭೆ ಮಾಡಿ ನಾಟಕ ಮಾಡುವುದಲ್ಲ. ಮದ್ದೂರಿನಲ್ಲಿನ ಮಸೀದಿ ಅಕ್ರಮ ಇದೆ. ಮೊದಲು ಆ ಮಸೀದಿ ಧ್ವಂಸ ಆಗಬೇಕು. 500 ಹಿಂದೂಗಳ ಮೇಲೆ ಕೇಸ್ ಹೊಡೆದಿಲ್ಲ. ಅಲ್ಲಿ ನಮ್ಮವರೇನೂ ಕಲ್ಲು ಹೊಡೆದಿಲ್ಲ. ನಾಗಮಂಗಲದಲ್ಲಿ ಪೆಟ್ರೋಲ್ ಬಾಂಬ್ ಹಾಕಿದ್ದರು. ಕಾಂಗ್ರೆಸ್ ಸರ್ಕಾರ “ಒನ್ ಸೈಡ್” ಸರ್ಕಾರ ಆಗಿದೆ. ಇದಕ್ಕೆ 2028ಕ್ಕೆ ಜನ ಸರಿಯಾಗಿ ಉತ್ತರ ಕೊಡುತ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎನ್ನುವ ಕಾಂಗ್ರೆಸ್ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಯತ್ನಾಳ್, ಇಸ್ಲಾಂ ನಲ್ಲಿ ಪುನರ್ಜನ್ಮ ಇಲ್ಲ ಎಂದು ಸಿಎಂ, ಭದ್ರಾವತಿ ಶಾಸಕರಿಗೆ ಗೊತ್ತಿಲ್ಲ. ಅವರ ಧರ್ಮಗ್ರಂಥ ಪ್ರಕಾರ ಮತ್ತೆ ಹುಟ್ಟು ಇಲ್ಲ. ಪುನರ್ಜನ್ಮ ಎನ್ನುವುದು ಇರುವುದು ಹಿಂದೂ ಧರ್ಮದಲ್ಲಿ ಮಾತ್ರ. ಈತ ಬರೀ ಮುಸ್ಲೀಂ ಓಟಿಂದ ಆರಿಸಿ ಬಂದನೇ ? ಮುಂದಿನ ಜನ್ಮದಲ್ಲಿ ನಾನು ಮುಸ್ಲಿಂ ಆಗಿ ಹುಟ್ಟಬೇಕು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಇಸ್ಲಾಂ ಅಂದರೆ ಶಾಂತಿ ಎಂದು ಸಿಎಂ ಹೇಳುತ್ತಾರೆ. ಮಸೀದಿ ಮೇಲಿಂದ ಕಲ್ಲು ಹೊಡೆದವರು ಹಿಂದೂಗಳೆ ? ನಾಟಕ ಮಾಡಿ ಮುಸ್ಲಿಂಮರ ಪರ ಈ ಸರ್ಕಾರವಿದೆ. ಕಾಂಗ್ರೆಸ್ ಸರ್ಕಾರಕ್ಕೆ ಕಾಲ ತುಂಬಿ ಬಂದಿದೆ. ಗಣೇಶನ ನೆಪದಿಂದಲೇ ಈ ಸರ್ಕಾರ ಬಿದ್ದು ಹೋಗುತ್ತದೆ ಎಂದು ಅವರು ಕೆಂಡಾಮಂಡಲರಾದರು.
ಇನ್ನು, ಸರ್ಕಾರ ಗಲಾಟೆ ಮಾಡಿದವರ ಪ್ರಕರಣವನ್ನು ವಾಪಸ್ ಪಡೆದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿ, ಪೊಲೀಸ್ ಠಾಣೆಯ ಮೇಲೆ ದಾಳಿ, ಸರ್ಕಾರಿ ಬಸ್ ಸುಟ್ಟ ಮುಸ್ಲಿಂಮರ ಮೇಲಿನ ಪ್ರಕರಣ ವಾಪಸ್ ಪಡೆದಿದ್ದಾರೆ. ಮುಸ್ಲಿಂ ಮೇಲಿನ ಎಲ್ಲಾ ಪ್ರಕರಣ ವಾಪಸ್ ಪಡೆಯುತ್ತಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಹಿಂದೂಗಳ ಮೇಲಿನ ಪ್ರಕರಣ ವಾಪಾಸ್ ಪಡೆದಿಲ್ಲ. “ಬಿಜೆಪಿಯವರೂ ಕಳ್ಳರೇ, ರಾತ್ರಿ ಸಿದ್ಧರಾಮಯ್ಯ, ಡಿಕೆಶಿ ಮನೆಗೆ ಹೋಗಿ ಮಜಾ ಮಾಡುತ್ತಾರೆ”. ಮುಂಜಾನೆ ಎದ್ದು, ಹಿಂದುತ್ವ ಉಳಿಸುತ್ತೇನೆ ಅಂದರೆ ಹೇಗಾಗುತ್ತದೆ ? ಮೊದಲೂ ಹೊಂದಾಣಿಕೆ ರಾಜಕಾಋಣ ಮಾಡುವುದನ್ನು ಬಿಡಿ ಎಂದು ಯತ್ನಾಳ್ ಕಿಡಿ ಕಾರಿದ್ದಾರೆ.



















