ಬೆಂಗಳೂರು : ರೌಡಿ ಬಿಕ್ಲು ಶಿವ ಕೊಲೆ ಪ್ರಕರಣದ ತನಿಖೆ ಚುರುಕು ಕಂಡಿದೆ. ಎಲ್ಲಾ ಆರೋಪಿಗಳ ಮೇಲೆ ಕೋಕಾ ಕಾಯ್ದೆ ವಿಧಿಸಿ ವಿಚಾರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.
ಸದ್ಯ ಕಿರಣ್ ಸೇರಿ ನಾಲ್ವರನ್ನು ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ಮಾಡಲಾಗುತ್ತಿದ್ದು, ಕೊಲೆಯ ಒಳಸಂಚಿನ ಸೂತ್ರಧಾರನಾಗಿರುವ ಜಗ್ಗ ಅಲಿಯಾಸ್ ಜಗದೀಶ್ ನನ್ನು ಸಿಐಡಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜಗ್ಗನಿಗೆ ಶಾಸಕ ಬೈರತಿ ಬಸವರಾಜು ಜೊತೆಗಿನ ಸಂಪರ್ಕದ ಬಗ್ಗೆ ವಿಚಾರಣೆ ಮಾಡುತ್ತಿರುವುದು ಮಾತ್ರವಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಟಿ ರಚಿತರಾಮ್ ಜೊತೆಗಿನ ಪೋಟೋಸ್ ಬಗ್ಗೆಯೂ ವಿಚಾರಣೆ ಮಾಡಿದ್ದು, ಈ ವೇಳೆ ರಚಿತರಾಮ್ ಗೂ ತನಗೂ ಸಂಪರ್ಕವಿಲ್ಲ. ರವಿಭೋಪಣ್ಣ ಸಿನಿಮಾ ಶೂಟಿಂಗ್ ವೇಳೆ ಜೊತೆಯಲ್ಲಿ ಪೋಟೋಸ್ ತೆಗೆದುಕೊಂಡಿದ್ದೆ. ಅವರ ಅಭಿಮಾನಿಯಾಗಿ ಗಿಪ್ಟ್ ಕೊಟ್ಟಿದ್ದೆಯಷ್ಟೇ. ಆದರೆ, ಒಡವೆ ಬಗ್ಗೆ ಗೊತ್ತಿಲ್ಲ ಎಂದು ಜಗ್ಗ ಹೇಳಿಕೊಂಡಿದ್ದಾನೆ.
ಸಿನಿಮಾ ನಿರ್ಮಾಣ ಸಂಸ್ಥೆಯಿಂದ ಒಡವೆ, ಸೀರೆ ಗಿಪ್ಟ್ ನೀಡಲಾಗಿತ್ತು. ತನ್ನ ಸ್ನೇಹಿತರ ಮೂಲಕ ಸಿನಿಮಾ ಶೂಟಿಂಗ್ ಸ್ಥಳಕ್ಕೆ ಹೋಗಿದ್ದೆ ಎಂದು ವಿಚಾರಣೆಯಲ್ಲಿ ಹೇಳಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಶಾಸಕ ಬೈರತಿ ಬಸವರಾಜು, ರಚಿತರಾಮ್ ಸೇರಿ ಸೆಲಬ್ರೆಟೀಸ್, ಕೆಲವು ರಾಜಕಾರಣಿಗಳ ಸಂಪರ್ಕದ ಸಿಐಡಿ ಪೊಲೀಸರು ವಿಚಾರಣೆಯ ವೇಳೆಯಲ್ಲಿ ಪ್ರಶ್ನಿಸಿದ್ದಾರೆ.



















