ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೇ ಎನ್ನುವ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯದಲ್ಲಿ ದಿನ ಕಳೆದಂತೆ ಅತ್ಯಾಚಾರ ಪ್ರಕರಣಗಳು ಹೆಚ್ಚಳವಾಗುತ್ತಲೇ ಇದೆ. ಅತ್ಯಾಚಾರಿಗಳಿಗೆ ಶಿಕ್ಷೆಯ ಪ್ರಮಾಣವೂ ಕಡಿಮೆ ಇರುವುದರಿಂದ ಅತ್ಯಾಚಾರ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಳವಾಗುತ್ತಲೇ ಇದೆ ಎಂಬ ಮಾಹಿತಿ ಈಗ ಲಭ್ಯವಾಗಿದೆ.
ಹೌದು, ರಾಜ್ಯದಲ್ಲಿ ಅತ್ಯಾಚಾರಿಗಳಿಗೆ ಆಗುತ್ತಿರುವ ಶಿಕ್ಷೆಯ ಪ್ರಮಾಣ ಕೇವಲ ಶೇ.3.6ರಷ್ಟಿದೆ ಎಂದರೇ ನೀವು ನಂಬಲೇ ಬೇಕು.
ರಾಜೀ ಸಂಧಾನದ ಮೂಲಕ ಅದೆಷ್ಟೋ ಪ್ರಕರಣಗಳು ಬಗೆಹರಿಯುತ್ತಿವೆಯಂತೆ. ಅದರಲ್ಲೂ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ. ಸರ್ಕಾರ ಕೊಟ್ಟ ಅಂಕಿ ಅಂಶ ಇದೀಗ ಆತಂಕಕ್ಕೆ ಕಾರಣವಾಗಿದೆ.
“ಯಾವ್ಯಾವ ವರ್ಷದಲ್ಲಿ ಎಷ್ಟೆಷ್ಟು ಪ್ರಕರಣಗಳು “
ವರ್ಷ ಪ್ರಕರಣದ ಸಂಖ್ಯೆ ಬಂಧಿತರ ಸಂಖ್ಯೆ
2023 600 767
2024 739 969
2025
(ಜುಲೈ ಅಂತ್ಯಕ್ಕೆ) 549 407
“ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ”
ವರ್ಷ ಶಿಕ್ಷೆಯ ಪ್ರಮಾಣ
2021 11.7%
2022 8.4%
2023 3.6%
ರಾಜ್ಯದಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳು
ವರ್ಷ ಪ್ರಕರಣಗಳು
2023 1167
2024 1517
2025
(ಜುಲೈ ಅಂತ್ಯಕ್ಕೆ) 1042
ಅತ್ಯಾಚಾರಿಗಳಿಗೆ ಶಿಕ್ಷೆಯ ಪ್ರಮಾಣ ಕಡಿಮೆಯಾಗುವುದಕ್ಕೆ ಕಾರಣಗಳು :
-ರಾಜೀ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ.
-ನ್ಯಾಯಾಲಯದ ವೇಳೆ ಪ್ರತಿಕೂಲ ಸಾಕ್ಷಿ ಹೇಳಿಕೆ ನೀಡುತ್ತಿರುವುದು.
– ನ್ಯಾಯಾಲಯದ ವಿಚಾರಣೆಗಳಿಗೆ ಹಾಜರಾಗಲು ನಿರಾಸಕ್ತಿ ವಹಿಸುತ್ತಿರುವುದು.
– ಅತ್ಯಾಚಾರ ಸಾಬೀತು ಪಡಿಸುವಲ್ಲಿ ವಿಫಲವಾಗಿರುವುದು.
-ಕೆಲವೊಮ್ಮೆ ತನಿಖಾ ಪ್ರಕ್ರಿಯೆಯಲ್ಲಿ. ಲೋಪವಾಗುತ್ತಿರುವುದು.
– 164 ಹೇಳಿಕೆ, ನ್ಯಾಯಾಲಯದ ಹೇಳಿಕೆ ಹೊಂದಾಣಿಕೆಯಾಗದಿರುವುದು.
-ಸಾಕ್ಷಿದಾರರು ಆರೋಪಿತರನ್ನ ತಪ್ಪಾಗಿ ಗುರುತಿಸುವುದು.
-ವಿಚಾರಣೆ ವೇಳೆ ಸಾಕ್ಷಿದಾರರು ಮೃತಪಡುವುದು.
– ಕಾನೂನು ಪ್ರಕ್ರಿಯೆ ವಿಳಂಬದಿಂದ ಸಾಕ್ಷಿದಾರರ ನಿರಾಸಕ್ತಿ.
-ವೈಜ್ಞಾನಿಕ ಸಾಕ್ಷ್ಯದ ಕೊರತೆ.


















