ನವ ದೆಹಲಿ : ಭಾರತ ಎಷ್ಟೇ ಆರ್ಥಿಕ ಒತ್ತಡ ಬಂದರೂ, ಅದನ್ನು ತಡೆದುಕೊಳ್ಳುವ ಶಕ್ತಿಯನ್ನು ನಮಗಿದೆ” ಎಂದು ಹೇಳಿದ್ದಾರೆ. ಆಗಸ್ಟ್ 27 ರಿಂದ ಜಾರಿಗೆ ಬರುವಂತೆ ಭಾರತೀಯ ಸರಕುಗಳ ಮೇಲೆ ಅಮೆರಿಕ ವಿಧಿಸಿರುವ ಶೇಕಡಾ 50 ರಷ್ಟು ಸುಂಕದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು “ವಾಷಿಂಗ್ಟನ್‌ನ ಆರ್ಥಿಕ ಒತ್ತಡವನ್ನು ಲೆಕ್ಕಿಸದೆ ತಮ್ಮ ಸರ್ಕಾರವು ಭಾರತಕ್ಕೆ ಒಂದು ಮಾರ್ಗವನ್ನು ಕಂಡುಕೊಳ್ಳುತ್ತದೆ” ಎಂದು ಹೇಳಿದ್ದಾರೆ.
ಅಹಮದಾಬಾದ್‌ನ ಖೋಡಲ್‌ಧಾಮ್ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು, “ಎಷ್ಟೇ ಆರ್ಥಿಕ ಒತ್ತಡ ಬಂದರೂ, ಅದನ್ನು ತಡೆದುಕೊಳ್ಳುವ ಶಕ್ತಿಯನ್ನು ನಾವು ಹೆಚ್ಚಿಸಿಕೊಳ್ಳುತ್ತಲೇ ಇರುತ್ತೇವೆ” ಎಂದ ಮೋದಿ. “ಇಂದು ಆತ್ಮನಿರ್ಭರ ಭಾರತ ಅಭಿಯಾನವು ಗುಜರಾತ್‌ನಿಂದ ಸಾಕಷ್ಟು ಶಕ್ತಿಯನ್ನು ಪಡೆಯುತ್ತಿದ್ದು, ಇದರ ಹಿಂದೆ ಎರಡು ದಶಕಗಳ ಕಠಿಣ ಪರಿಶ್ರಮವಿದೆ…” ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಮೋದಿಯವರು, “ಇಂದು ನಾವೆಲ್ಲರೂ ಜಗತ್ತಿನಲ್ಲಿ ಆರ್ಥಿಕ ಸ್ವಾರ್ಥವನ್ನು ಆಧರಿಸಿದ ನೀತಿಗಳನ್ನು ನೋಡುತ್ತಿದ್ದೇವೆ.” ಆದ್ರೆ, ಭಾರತವು ಇಂತಹ ರಕ್ಷಣಾವಾದಿ ಕ್ರಮಗಳ ವಿರುದ್ಧ ದೃಢವಾಗಿ ನಿಲ್ಲಲಿದ್ದು, ತನ್ನ ನಾಗರಿಕರ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತದೆ” ಎಂದು ರಾಷ್ಟ್ರಕ್ಕೆ ಭರವಸೆ ನೀಡಿದ್ದಾರೆ.