ಶಿವಮೊಗ್ಗ: ಧರ್ಮಸ್ಥಳ ಪ್ರಕರಣದಲ್ಲಿ ಈಗ ಸಾಕಷ್ಟು ಅನುಮಾನಗಳು ಮುಕ್ತವಾಗಿದ್ದು, ರಾಷ್ಟ್ರದ್ರೋಹಿ ಮುಸಲ್ಮಾನರ ಸಂಘಟನೆ ಇದರ ಹಿಂದೆ ಇದೆ. ಹೀಗಾಗಿ ಇವರೆಲ್ಲರನ್ನೂ ಒದ್ದು ಒಳಗೆ ಹಾಕಿ ಬಾಯಿ ಬಿಡಿಸಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ಈ ಬುರುಡೆ ಗ್ಯಾಂಗ್ ನ ಎಲ್ಲರಿಗೂ ಮಂಪರು ಪರೀಕ್ಷೆ ನಡೆಸಿ ಇವರ ಹಿಂದೆ ಯಾವ್ ಯಾವ ಸಂಘಟನೆಗಳಿವೆ ಎಂಬುದನ್ನು ತಿಳಿಯಬೇಕು. ಈ ತನಿಖೆಯ ಮೂಲಕ ಪರಿಶುದ್ಧವಾಗಿ ಧರ್ಮಸ್ಥಳ ಹೊರಬರಬೇಕಾಗಿದೆ. ಚಿನ್ನಯ್ಯ ಮತ್ತು ಸುಜಾತಾ ಭಟ್ ಹೇಳಿಕೆಗಳಿಂದ ಧರ್ಮಸ್ಥಳದ ಬಗ್ಗೆ ಅನುಮಾನ ಹುಟ್ಟಿತ್ತು. ಈಗ ಎಲ್ಲಾ ಆರೋಪಗಳೆಲ್ಲವೂ ಸುಳ್ಳು ಎಂದು ಸಾಬೀತಾಗಿದೆ ಈಗ ಈ ಪಾತ್ರಧಾರಿಗಳೆಲ್ಲರೂ, ಸೂತ್ರಧಾರಿಗಳ ಬಗ್ಗೆ ಬಾಯಿ ಬಿಟ್ಟಿದ್ದಾರೆ ಎಂದಿದ್ದಾರೆ.
ಬೆಳಗ್ಗೆ ಧರ್ಮಸ್ಥಳದಲ್ಲಿ ಎಸ್.ಐ.ಟಿ ತಂಡದ ಜೊತೆಗಿರುತ್ತಿದ್ದ ಚಿನ್ನಯ್ಯ ರಾತ್ರಿ ಹೊತ್ತು ಸೂತ್ರಧಾರಿಗಳ ಜೊತೆಗಿರುತ್ತಿದ್ದ. ಚಿನ್ನಯ್ಯ ರಾತ್ರಿ ಹೊತ್ತು ಸೂತ್ರಧಾರಿಗಳ ಜೊತೆಗೆ ಸಭೆ ನಡೆಸಿ ಸಂಚು ರೂಪಿಸಿ, ಧರ್ಮವನ್ನು ನಾಶ ಮಾಡುವುದು, ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ವಿರುದ್ಧ ಷಡ್ಯಂತ್ರದ ಸಂಚು ಮಾಡುತ್ತಿದ್ದ ಎಂಬುದು ಬಯಲಾಗಿದೆ ಎಂದು ತಿಳಿಸಿದ್ದಾರೆ.
ಚಿನ್ನಯ್ಯ ಧರ್ಮಸ್ಥಳದ ಬಗ್ಗೆ ಸಂಚು ರೂಪಿಸಿ ದೆಹಲಿವರೆಗೂ ಈ ವಿಷಯವನ್ನು ಕೊಂಡೊಯ್ದಿದು, ದೆಹಲಿಯಲ್ಲಿ ಈ ಬಗ್ಗೆ ಸಭೆ ನಡೆಸಲಾಗಿದೆ. ಈ ಎಲ್ಲಾ ದ್ರೋಹಿಗಳಿಂದ ಧರ್ಮಸ್ಥಳ ಅಪವಿತ್ರವಾಗಿದೆ. ಜಯಂತ್, ತಿಮ್ಮರೋಡಿ, ಚಿನ್ನಯ್ಯ, ಸಮೀರ್, ಮಟ್ಟಣ್ಣ ಸೇರಿದಂತೆ ಇದರ ಹಿಂದೆ ಯಾರ್ ಯಾರು ಇದ್ದಾರೆಂಬುದು ತನಿಖೆಯಿಂದ ಹೊರಬರಲಿ ಧರ್ಮಸ್ಥಳಕ್ಕೂ, ಎಸ್.ಡಿ.ಪಿ.ಐ. ಗೂ ಸಂಬಂಧವೇನು? ಅವರು ಯಾಕೆ ಇದರ ಬಗ್ಗೆ ಪ್ರತಿಭಟನೆ ನಡೆಸಬೇಕು !? ರಾಷ್ಟ್ರದ್ರೋಹಿ, ವಿದೇಶಿ ಸಂಘಟನೆಗಳು ಇದರ ಹಿಂದೆ ಇದಿಯಾ ಎಂಬುದು ಬಯಲಾಗಬೇಕಿದೆ ಎಂದು ಹೇಳಿದ್ದಾರೆ.
ಎಸ್ಐಟಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಿ ಹಲವಾರು ಅಂಶ ಹೊರಗೆ ತಂದಿದ್ದಾರೆ. ಈ ಪ್ರಕರಣದಿಂದ ಧರ್ಮಸ್ಥಳವನ್ನು ಅಪವಿತ್ರ ಮಾಡಲಾಗಿದ್ದು,12 ವರ್ಷಗಳಿಂದ ಮಾಡಿದ್ದ ಸಂಚು, ಷಡ್ಯಂತ್ರ ಹೊರಗೆ ಬರಬೇಕು, ಕಲುಷಿತ ವ್ಯವಸ್ಥೆ ಸರಿಯಾಗಬೇಕು ಎಂದರೆ ಈ ಪ್ರಕರಣವನ್ನು ಎನ್.ಐ.ಎ ತನಿಖೆ ಗೆ ನೀಡಿ, ಇವರೆಲ್ಲರನ್ನೂ ಮಂಪರು ಪರೀಕ್ಷೆಗೊಳಪಡಿಸಬೇಕು. ಧರ್ಮಸ್ಥಳಕ್ಕೆ ಕಳಂಕ ಅಂಟಿಸಲು ಹೊರಟಿದ್ದವರ ಬಗ್ಗೆ ಎಸ್ಐಟಿ ಅಧಿಕಾರಿಗಳು ಮಧ್ಯಂತರ ವರದಿ ನೀಡುವ ಮೂಲಕ ಗೊಂದಲ ಪರಿಹರಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.