ಬೆಂಗಳೂರು: ಬಿಬಿಎಂಪಿ ಕಲ್ಯಾಣ ಯೋಜನೆಯಡಿ ಅಕ್ರಮ ನಡೆದಿದೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ದಾಖಲೆಗಳ ಸಮೇತ ಬಿಬಿಎಂಪಿ ಸಹಾಯಕ ಆಯುಕ್ತ ನಾಗಭೂಷಣ್ ವಿರುದ್ಧ ದೂರು ದಾಖಲಿಸಿದ್ದರು. ಸದ್ಯ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜೀವ್ ಗಾಂಧಿ ವಸತಿ ನಿಗಮ ಸ್ಪಷ್ಟನೆ ನೀಡಿದೆ.
ಅಮೃತ ಮಹೋತ್ಸವ ಯೋಜನೆಯಡಿ ಅಕ್ರಮ ನಡೆದಿದೆ ಎಂದು ಆರೋಪ ಕೇಳಿ ಬರ್ತಿದ್ದಂತೆ ರಾಜೀವ್ ಗಾಂಧಿ ವಸತಿ ನಿಗಮ ಸ್ಪಷ್ಟನೆ ನೀಡಿ ಎನ್.ಆರ್ ರಮೇಶ್ ವಿರುದ್ಧ ಕಿಡಿಕಾರಿದೆ. ಎಂಟು ವಾರ್ಡ್ಗಳಲ್ಲಿ 550 ಫಲಾನುಭವಿಗೆ 27.50 ಕೋಟಿ ಹಣ ಬಿಡುಗಡೆ ಮಾಡಿಲ್ಲ. ಆದರೆ ಪಾಲಿಕೆ ವ್ಯಾಪ್ತಿಯಲ್ಲಿ ಇಬ್ಬರು ಫಲಾನುಭವಿಗಳಿಗೆ 27.50 ಕೋಟಿ ಪೈಕಿ 10 ಲಕ್ಷ ಮಾತ್ರ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ. ಎನ್. ಆರ್ ರಮೇಶ್ ಸತ್ಯಕ್ಕೆ ದೂರವಾದ ಆರೋಪ ಮಾಡಿದ್ದಾರೆ. ಅಮೃತ ಮಹೋತ್ಸವ ಯೋಜನೆಯಡಿ ಯಾವುದೇ ಆಕ್ರಮ ನಡೆದಿಲ್ಲ ಎಂದು ರಾಜೀವ್ ಗಾಂಧಿ ವಸತಿ ನಿಗಮ ಸ್ಪಷ್ಟಪಡಿಸಿದೆ.


















