ಬೆಂಗಳೂರು : ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಿಂದೂ ಹೋರಾಟಗಾರ ತೇಜಸ್ ಗೌಡ ಇ.ಡಿ ಮೆಟ್ಟಿಲೇರಿದ್ದಾರೆ.
ಭಜರಂಗ ದಳದ ತೇಜಸ್ ಗೌಡ ಅವರು, ಸಾಮಾಜಿಕ ಜಾಲತಾಣಗಳು ಹಾಗೂ ಯೂಟ್ಯೂಬರ್ಸ್ ಗಳ ಮೇಲೆ, ಇ.ಡಿ ಕಚೇರಿಗೆ ದೂರು ನೀಡಿದ್ದಾರೆ.
ಧರ್ಮಸ್ಥಳವನ್ನು ಗುರಿಯಾಗಿಟ್ಟುಕೊಂಡು ಸುಖಾಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ. ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುವ ವಿಷಯಗಳಿರುವ ವೀಡಿಯೋ ಮಾಡುತ್ತಿರುವುದಕ್ಕೆ ವಿದೇಶಗಳಿಂದ ಅಕ್ರಮ ಹಣ ಸಂದಾಯವಾಗುತ್ತಿರುವುದರ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೇಶ ವಿದೇಶಗಳಿಂದ ಕೆಲವು ಯೂಟ್ಯೂಬರ್ಸ್ ಅಕ್ರಮ ಹಣ ಪಡೆದಿರುವುದಾಗಿ ಮಾಹಿತಿ ಇದ್ದು, ಅಕ್ರಮ ಹಣ ಸಂದಾಯವಾಗಿರುವ ಬಗ್ಗೆ ತನಿಖೆ ನಡೆಸುವಂತೆ ಬೆಂಗಳೂರು ಇ.ಡಿ ಕಚೇರಿಗೆ ತೇಜಸ್ ಗೌಡ ದೂರು ಸಲ್ಲಿಸಿದ್ದಾರೆ.



















