ಬೆಂಗಳೂರು : ವನ್ಯಜೀವಿ ಸಂರಕ್ಷಕ ಹಾಗೂ ಉರಗ ರಕ್ಷಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು(ಮಂಗಳವಾರ) ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.
“ವನ್ಯಜೀವಿ ಸಂರಕ್ಷಕರು ಹಾಗೂ ಉರಗ ಸಂರಕ್ಷಕರ ಬೇಡಿಕೆಗಳೇನು ?”
- ವನ್ಯಜೀವಿ ಸಂರಕ್ಷಕರು, ಉರಗ ರಕ್ಷಕರಿಗೆ ವನ್ಯಜೀವಿಗಳಿಂದ ರಕ್ಷಣೆ ವೇಳೆಯಲ್ಲಿ ಆಕಸ್ಮಿಕವಾಗಿ ಸಾವನಪ್ಪಿದಾಗ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು.
- ಉರಗ ರಕ್ಷಕರಿಗೆ ರಕ್ಷಣೆ ವೇಳೆಯಲ್ಲಿ ವನ್ಯಜೀವಿಗಳಿಂದ ದಾಳಿಗೆ ಒಳಗಾದಾಗ ವೈದ್ಯಕೀಯ ವೆಚ್ಚವನ್ನು ಭರಿಸಬೇಕು.
- ಮಾಸಿಕ ಗೌರವಧನ ನೀಡುವ ಯೋಜನೆ ರೂಪಿಸಬೇಕು.
- ಉರಗ ರಕ್ಷಕರಿಗೆ ಅಧಿಕೃತವಾಗಿ ತರಬೇತಿ, ಕೌಶಲ್ಯ ನೀಡಿ ಸಲಕರಣೆಗಳನ್ನು ನೀಡಬೇಕು.
- ವನ್ಯಜೀವಿ ಸಂರಕ್ಷಕರು ಹಾಗೂ ಹಾವು ರಕ್ಷಕರಿಗೆ ಜೀವವಿಮೆ ಮತ್ತು ಆರೋಗ್ಯವಿಮೆ ಮಾಡಿಸಬೇಕು.
- ವನ್ಯಜೀವಿ ಸಂರಕ್ಷಕರು, ಉರಗ ರಕ್ಷಕರಿಗೆ ಪರವಾನಿಗೆ ಹಾಗೂ ಗುರುತಿನ ಚೀಟಿಯನ್ನು ಸಂಬಂಧಪಟ್ಟ ಇಲಾಖೆಯಿಂದ ನೀಡಬೇಕು.
- ವನ್ಯಜೀವಿ ಸಂರಕ್ಷಕರ ತುರ್ತು ಪರಿಸ್ಥಿತಿ ನಿಧಿ ಸ್ಥಾಪಿಸಬೇಕು.
ಇಷ್ಟು ಬೇಡಿಕೆಗಳನ್ನು ಮುಂದಿಟ್ಟುಕೊಂಡು ವನ್ಯಜೀವಿ ಸಂರಕ್ಷಕರ ಹಿತರಕ್ಷಣೆ ಮತ್ತು ಕಲ್ಯಾಣ ಸಂಸ್ಥೆ ಸರ್ಕಾರಕ್ಕೆ ಆಗ್ರಹಿಸಲಿದೆ.



















