ಹಾಸನ: ಪರಿಸರ ರಾಯಭಾರಿ ಸಾಲುಮರದ ತಿಮ್ಮಕ್ಕ ನೆಟ್ಟಿದ್ದ ಗಿಡಗಳ ಧ್ವಂಸ ಮಾಡಿರುವ ಆರೋಪ ಕೇಳಿ ಬಂದಿದೆ.
ಹಾಸನ ಜಿಲ್ಲೆ ಬೇಲೂರು ತಹಸಿಲ್ದಾರ್ ಕಛೇರಿ ಆವರಣದಲ್ಲಿ ಹಲವು ವರ್ಷಗಳ ಹಿಂದೆ ತಿಮ್ಮಕ್ಕ ಫೌಂಡೇಷನ್ ವತಿಯಿಂದ ಗಿಡಗಳನ್ನು ನಡೆಸಲಾಗಿತ್ತು. ಆದರೆ ಗಿಡಗಳು ಬೆಳೆದಿರುವ ಸಂದರ್ಭದಲ್ಲಿ ಗಿಡಗಳನ್ನು ನಾಶ ಮಾಡಲಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಸಾಲುಮರದ ತಿಮ್ಮಕ್ಕ ಅವರ ಪುತ್ರ ಉಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೊಂಪಾಗಿ ಬೆಳೆದಿದ್ದ ಗಿಡಗಳನ್ನು ವಿನಾಕಾರಣ ನಾಶ ಮಾಡಲಾಗಿದೆ. ಅಧಿಕಾರಿಗಳನ್ನು ಕೇಳಿದರೆ ಆವರಣ ಸ್ಚಚ್ಛತೆ ಹೆಸರಿನಲ್ಲಿ ಗಿಡ ಮರ ನಾಶ ಮಾಡಲಾಗಿದೆ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಸಾಲುಮರದ ತಿಮ್ಮಕ್ಕ ಫೌಂಡೇನ್ ಅಧ್ಯಕ್ಷ ಉಮೇಶ್ ಅಸಮಾಧಾನ ಹೊರಕಿದ್ದಾರೆ.
ಗಿಡ ಮರಗಳ ನಾಶಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ. ಕ್ರಮ ತೆಗೆದುಕೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ವೃಕ್ಷ ಮಾತೆ ತಿಮ್ಮಕ್ಕ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.


















