ಬೆಂಗಳೂರು : ಸ್ವಾತಂತ್ರ್ಯೋತ್ಸವದ ಅಂಗವಾಗಿ ಪರಮ್ ಫೌಂಡೇಶನ್ ವತಿಯಿಂದ ಆಗಸ್ಟ್ 14ರಂದು ʼಪರಂಪರಾʼ ದೇಶಭಕ್ತಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಬೆಂಗಳೂರಿನ ಎನ್. ಆರ್. ಕಾಲೋನಿಯ ಡಾ. ಸಿ. ಅಶ್ವಥ್ ಕಲಾಭವನದಲ್ಲಿ ಗಾಯಕ ಶಂಕರ್ ಶಾನುಭೋಗ್ ಮತ್ತು ತಂಡದವರಿಂದ ಬಹುಭಾಷಾ ದೇಶಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮ ಸಂಪೂರ್ಣ ಉಚಿತವಾಗಿದ್ದು, ಆಯೋಜಕರು ಆಸಕ್ತರನ್ನು ಪತ್ರಿಕಾ ಪ್ರಕಟಣೆಯ ಮೂಲಕ ಆಹ್ವಾನಿಸಿದ್ದಾರೆ.
ಶಂಕರ್ ಶಾನುಭೋಗ್ ನೇತೃತ್ವದ ತಂಡದಲ್ಲಿ ಕೃಷ್ಣ ಉಡುಪ, ರಮೇಶ್ ಕುಮಾರ್ ಜಿ.ಎಲ್, ಮೇಘನಾ ಹಳಿಯಾಳ, ಪದ್ಮನಾಭ ಕಾಮತ್, ಲೋಕೇಶ್ ಆರ್, ಸುದಾತ್ತ ಶ್ರೀಪಾದ್ ಮೊದಲಾದವರು ಇರಲಿದ್ದು, ಸಂಜೆ 6 ಗಂಟೆಯ ಮೇಲೆ ದೇಶಭಕ್ತಿಗೀತೆಗಳ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಭಾರತೀಯ ಅಂಚೆಗಳ ಪ್ರದರ್ಶನ. ಚಿತ್ರಕಾರರ ಕಲಾಕೃತಿಗಳನ್ನು ಒಳಗೊಂಡ ಅಂಚೆ ಕಾರ್ಡ್‌ಗಳೊಂದಿಗೆ ಪತ್ರ ಬರೆಯುವ ಕಲೆಯನ್ನು ಮರುಕಳಿಸುವುದಕ್ಕೆ ಇಂದೊಂದು ಅವಕಾಶವಾಗಿದ್ದು, ಪ್ರೇಕ್ಷಕರೂ ಕೂಡ ಇದರಲ್ಲಿ ಭಾಗವಹಿಸಬಹುದು, ಪತ್ರವನ್ನೂ ಬರೆದು ಅಂಚೆ ಪತ್ರವ್ಯವಹಾರಗಳನ್ನು ನೆನಪಿಸಿಕೊಳ್ಳಬಹುದು ಎಂದು ಆಯೋಜಕರು ತಿಳಿಸಿದ್ದಾರೆ.



















