ಬೆಂಗಳೂರು : ಮತ ಕಳ್ಳತನದ ವಿರುದ್ಧ ಕಾಂಗ್ರೆಸ್ ಇಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಕಾಂಗ್ರೆಸ್ ಪ್ರತಿಭಟನೆಗೆ ಪ್ರತಿಯಾಗಿ ಬಿಜೆಪಿಯೂ ಪ್ರತಿಭಟನೆಯನ್ನು ಮಾಡುವುದಕ್ಕೆ ಮುಂದಾಗಿತ್ತು, ಆದರೆ ಈಗ ಬಿಜೆಪಿ ತಾನು ನಿರ್ಧರಿಸಿದ್ದ ಪ್ರತಿಭಟನೆಯನ್ನು ಮುಂದೂಡಿದೆ.
ಕಾಂಗ್ರೆಸ್ ಪ್ರತಿಭಟನೆ ವಿರುದ್ಧ ಹೂಡಿದ್ದ ಪ್ರತಿತಂತ್ರವನ್ನು ಬಿಜೆಪಿ ಮುಂದೂಡಿದ್ದು, ಮೋದಿ ಆಗಮನದ ಹಿನ್ನೆಲೆಯಲ್ಲಿ ಬಿಜೆಪಿ ಹಿಂದೆ ಸರಿದಿದೆ ಎಂಬ ಚರ್ಚೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆ.10ಕ್ಕೆ ಹಳದಿ ಮಾರ್ಗದ ಉದ್ಘಾಟನೆಗೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಮೋದಿಗೆ ಅಪಮಾನ ಆಗುವ ಆತಂಕದಲ್ಲಿ ಬಿಜೆಪಿ ಪ್ರತಿಭಟನೆಯನ್ನು ಹಿಂಪಡೆದಿದೆ ಎಂದು ಹೇಳಲಾಗುತ್ತಿದೆ.
ರಾಹುಲ್ ಪ್ರತಿಭಟನೆಗೆ ಅಡ್ಡಿ ಪಡಿಸಿದರೆ ಮೋದಿ ಕಾರ್ಯಕ್ರಮಕ್ಕೂ ಅಡ್ಡಿ ಆಗುವ ಆತಂಕ ಬಿಜೆಪಿಗೆ ಎದುರಾಗಿದೆ. ಮೋದಿ ರಾಜ್ಯ ಭೇಟಿ ಬಳಿಕ ಪ್ರತಿಭಟನೆಗೆ ಬಿಜೆಪಿಯ ನಿರ್ಧರಿಸಲಿದೆ ಎನ್ನಲಾಗಿದೆ.
ಇನ್ನು, ರಾಹುಲ್ ಗಾಂಧಿ ಆರೋಪಕ್ಕೆ ಪ್ರತಿಭಟನೆ ಮೂಲಕವೇ ಪ್ರತ್ಯುತ್ತರವನ್ನು ಬಿಜೆಪಿ ಹೂಡುವುದಕ್ಕೆ ಮುಂದಾಗಿದೆ. ರಾಹುಲ್ ಟೀಕೆಗೆ ಪ್ರತಿ ಟೀಕೆ ಮಾಡುವುದಕ್ಕೆ ಬಿಜೆಪಿ ತಯಾರು ಮಾಡಿಕೊಳ್ಳಲಿದೆ ಎಂಬ ಮಾಹಿತಿ ಬಿಜೆಪಿ ಬಲ್ಲ ಮೂಲಗಳು ತಿಳಿಸಿವೆ. ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮಾಡಿದ ಅಪಮಾನವೆಂದು ಬಿಜೆಪಿ ಟೀಕಸಿ ಪ್ರತಿಭಟನೆ ನಡೆಸಲಿದೆ ಎಂದು ಹೇಳಲಾಗಿದೆ.