ಬೆಂಗಳೂರು : ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ 1’ ಚಿತ್ರದಲ್ಲಿ ಖ್ಯಾತ ನಟಿ ರುಕ್ಮಿಣಿ ವಸಂತ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಇಂದು ಅವರ ಪಾತ್ರದ ಪರಿಚಯ ಮಾಡಿಕೊಟ್ಟಿದೆ.
ಚಿತ್ರತಂಡ ಇದುವರೆಗೂ ಈ ವಿಚಾರವನ್ನು ಗುಪ್ತವಾಗಿಟ್ಟಿದ್ದು, ಇದೀಗ ಅಧಿಕೃತವಾಗಿ ಈ ವಿಚಾರವನ್ನು ಬಹಿರಂಗಪಡಿಸಿದೆ. ರುಕ್ಮಿಣಿ ವಸಂತ್ ʼಕಾಂತಾರಾ 1ʼ ಸಿನೆಮಾದಲ್ಲಿ ಕನಕಾವತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿಕೊಂಡಿದೆ. ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳ ಮೂಲಕ ಈ ಪಾತ್ರದ ಪರಿಚಯ ಮಾಡಿಸಿದ್ದು, ಚಿತ್ರದ ಬಗ್ಗೆ ಹಾಗೂ ರುಕ್ಮಿಣಿ ವಸಂತ್ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.
ಇತ್ತೀಚೆಗೆ ಬಿಡುಗಡೆಯಾಗಿರುವ ಮೇಕಿಂಗ್ ವಿಡಿಯೋದಲ್ಲಿಯೂ ಒಂದು ದೃಶ್ಯದಲ್ಲಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದರು.
‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ನಟನೆ ಬಳಿಕ ರಿಷಬ್ ಶೆಟ್ಟಿಯವರ ಆಡಿಷನ್‌ನಲ್ಲಿ ಭಾಗವಹಿಸಿದ್ದ ರುಕ್ಮಿಣಿ ವಸಂತ್ ‘ಕಾಂತಾರ’ ಜಗತ್ತಿನ ಭಾಗವಾಗಲು ಆಯ್ಕೆಯಾಗಿದ್ದರು ಎನ್ನಲಾಗಿತ್ತು. ಅಪ್ಪಟ ರಾಜಕುಮಾರಿಯಾಗಿ ರುಕ್ಮಿಣಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನೆಮಾ ಅಭಿಮಾನಿಗಳು ರುಕ್ಷಿಣಿ ವಸಂತ್ ಹೊಸ ಲುಕ್ ಗೆ ಮನಸೋತಿದ್ದಾರೆ.



















