ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಬಿಬಿಎಂಪಿ ಮಾತ್ರ ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವಂತೆ ವರ್ತಿಸುತ್ತಿದೆ. ಬಿಬಿಎಂಪಿ ವ್ಯಾಪ್ತಿಯ ನಮ್ಮ ಕ್ಲಿನಿಕ್ ಅವ್ಯವಸ್ಥೆಯ ಆಗರವಾಗುತ್ತಿದ್ದರೂ ಶೋಕಿ ಮಾತ್ರ ಬಿಡುತ್ತಿಲ್ಲ.
ನಮ್ಮ ಕ್ಲಿನಿಕ್ ಗೆ ಸಮರ್ಪಕ ವೈದ್ಯರಿಲ್ಲ. ಸಮರ್ಪಕ ಔಷಧಿ ಪೂರೈಕೆಯಾಗುತ್ತಿಲ್ಲ. ಸಿಬ್ಬಂದಿಗಳ ಕೊರತೆಯಾಗಿದೆ. ಇಷ್ಟಿದ್ದರೂ ಮೂಲಭೂತ ಸಮಸ್ಯೆ ಬಗೆಹರಿಸಿಕೊಳ್ಳದ ಪಾಲಿಕೆಯು ನಮ್ಮ ಕ್ಲಿನಿಕ್ ಗೆ ಎಲ್ ಇಡಿ ಖರೀದಿಸಲು ಮುಂದಾಗಿದೆ. ಒಟ್ಟು 100 ಎಲ್ ಇಡಿ ಟಿವಿ ಖರೀದಿಸಲು ಪಾಲಿಕೆ ಟೆಂಡರ್ ಆಹ್ವಾನಿಸಿದೆ. ಒಂದು ಟಿವಿಗೆ 49 ಸಾವಿರ ರೂ. ಖರ್ಚಾಗುತ್ತದೆ. ಇಷ್ಟೊಂದು ಮೊತ್ತದ 43 ಇಂಚಿನ ಒಟ್ಟು 100 ಟಿವಿ ಖರೀದಿಸಲು ಪಾಲಿಕೆ ನಿರ್ಧರಿಸಿದೆ. ಪಾಲಿಕೆಯ ಈ ದೂರ್ತ ನಡೆಗೆ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.



















