ಬಿಬಿಎಂಪಿ ವ್ಯಾಪ್ತಿಯ 412 ಬಾರ್, ಹೋಟೆಲ್, ರೆಸ್ಟೋರೆಂಟ್ ಗಳಿಗೆ ತಂಬಾಕು ನಿಯಂತ್ರಣ ಕಾಯ್ದೆಯಡಿ ಬಿಬಿಎಂಪಿ ಆರೋಗ್ಯ ಇಲಾಖೆಯಿಂದ ನೋಟಿಸ್ ನೀಡಲಾಗಿದೆ.
ನಗರದ ಬಹುತೇಕ ಬಾರ್, ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಸ್ಮೋಕಿಂಗ್ ಜೋನ್ ಇಲ್ಲ. ಆದರೆ, ತಂಬಾಕು ನಿಯಂತ್ರಣ ಕಾಯ್ದೆಯಡಿ ಸ್ಮೋಕಿಂಗ್ ಜೋನ್ ಕಡ್ಡಾಯವಾಗಿದೆ. 30 ಅಸನಕ್ಕಿಂತ ಹೆಚ್ಚಿನ ಅಸನ ಇರುವ ಪಬ್, ಬಾರ್, ರೆಸ್ಟೋರೆಂಟ್, ಹೋಟೆಲ್ ಗಳಲ್ಲಿ ಸ್ಮೋಕಿಂಗ್ ಜೋನ್ ಕಡ್ಡಾಯವಾಗಿರಬೇಕು ಎನ್ನುವುದು ನಿಯಮವಿದೆ. ಆದರೆ, ನಗರದಲ್ಲಿನ ನೂರಾರು ಹೋಟೆಲ್, ಬಾರ್, ರೆಸ್ಟೋರೆಂಟ್ ಗಳಲ್ಲಿ ಧೂಮಪಾನ ವಲಯವಿಲ್ಲ.
ಈ ಹಿನ್ನೆಲೆಯಲ್ಲಿ ನಗರದ 412 ಶಾಪ್ ಗಳಿಗೆ ನೋಟಿಸ್ ನೀಡಲಾಗಿದೆ. ನೋಟಿಸ್ ನೀಡಿದ 7 ದಿನಗಳಲ್ಲಿ ಸ್ಮೋಕಿಂಗ್ ವಲಯ ಸ್ಥಾಪಿಸಬೇಕು. ನಿಯಮ ಮೀರಿದರೆ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ



















