ಬೆಂಗಳೂರು : ರಾಜ್ಯದಲ್ಲಿ ರಾಹುಲ್ ಗಾಂಧಿ ಪ್ರತಿಭಟನೆ ವಿಚಾರಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಪರಮೇಶ್ವರ್, ಕಮೀಷನರೇಟ್ ಕಡೆಯಿಂದ ಎಸ್‌ಒಪಿ ಮಾಡಿಕೊಂಡಿದ್ದಾರೆ. ಜನಜಂಗುಳಿ ನಿಭಾಯಿಸಲು ಕ್ರಮ ಆಗಲಿದೆ. ಆದರೆ. ಅಂಥಹ ಜನ ಜಂಗುಳಿ ಸೇರಲ್ಲ, ಆದರೂ ಪೊಲೀಸ್ ಇಲಾಖೆಯಿಂದ ಎಲ್ಲಾ ಎಚ್ಚರಿಕೆ ಮಾಡಿಕೊಳ್ಳಲಾಗಿದೆ. ಇಂದು ನಮ್ಮ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಬರ್ತಿದ್ದಾರೆ. ಹೋರಾಟದ ರೂಪುರೇಷೆ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ದಲಿತ ಸಚಿವರು, ಶಾಸಕರ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಆಗಸ್ಟ್ 2 ರಂದು ನಮ್ಮ ಸಚಿವರು, ಶಾಸಕರ ಸಭೆ ಕರೆದಿದ್ದೇನೆ, ಒಳಮೀಸಲಾತಿ ಬಗ್ಗೆ ಚರ್ಚೆ ಮಾಡುತ್ತೇವೆ. ಒಳಮೀಸಲಾತಿ ಸಂಬಂಧ ವರದಿ ನೀಡಲಿದ್ದಾರೆ. ಹೀಗಾಗಿ ಮುಂದೇನು ಮಾಡಬೇಕೆಂದು ಚರ್ಚೆ ಮಾಡುತ್ತೇವೆ ಎಂದಿದ್ದಾರೆ.
ಆಗಸ್ಟ್ 2ರಂದು ಮತ್ತೆ ಸಭೆ ಮಾಡುತ್ತೇವೆ. ಹಿಂದೆ ಹೈಕಮಾಂಡ್ ಬ್ರೇಕ್ ಹಾಕಿದ್ದ ಸಭೆ ಅಲ್ಲ ಇದು, ಅದು ಬೇರೆ ಸಭೆ. ಇದು ಒಳಮೀಸಲಾತಿ ಸಂಬಂಧ ಚರ್ಚೆ ಮಾಡುವ ಸಭೆ ಎಂದು ಪರಮೇಶ್ವರ್ ಹೇಳಿದ್ದಾರೆ.