ಪೂರ್ವ ಏಷ್ಯಾ ರಾಷ್ಟ್ರಗಳಾದ ಥಾಯ್ಲೆಂಡ್ ಹಾಗೂ ಕಾಂಬೋಡಿಯಾ ಗಡಿ ಸಂಘರ್ಷ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಎರಡೂ ದೇಶಗಳ ನಡುವೆ ಪರಸ್ಪರ ವಾಯುದಾಳಿ ನಡೆಯುತ್ತಿದ್ದು, ಬಾಂಬ್ ಗಳು ಅಬ್ಬರಿಸುತ್ತಿವೆ. ಕಾಂಬೋಡಿಯಾದ ರಾಕೆಟ್ ಹಾಗೂ ಶೆಲ್ ದಾಳಿಗೆ ಥಾಯ್ಲೆಂಡ್‌ನಲ್ಲಿ ಓರ್ವ ಸೈನಿಕ ಸೇರಿದಂತೆ 20 ಮಂದಿ ನಾಗರಿಕರು ಸಾವನ್ನಪ್ಪಿರುವ ಕುರಿತು ವರದಿಯಾಗಿದೆ.
ಈ ಯುದ್ಧದಲ್ಲಿ ಈಗಾಗಲೇ 46 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಥಾಯ್ಲೆಂಡ್ ಕೂಡ F-16 ಜೆಟ್ ಬ್ರಹ್ಮಾಸ್ತ್ರ ಬಳಸಿ ಏರ್ಸ್ಟ್ರೈಕ್ ನಡೆಸಿದ್ದು, ಕಾಂಬೋಡಿಯಾದ 13 ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದೆ. ಸದ್ಯ ಗಡಿಯಲ್ಲಿ ಗುಂಡಿನ ಚಕಮಕಿ ನಿರಂತರವಾಗಿ ನಡೆಯುತ್ತಿದ್ದು 1 ಲಕ್ಷದ 68 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗುತ್ತಿದೆ. ಕಾಂಬೋಡಿಯಾ ಜೊತೆಗೆ ಹಂಚಿಕೊಂಡಿದ್ದ ಈಶಾನ್ಯ ಗಡಿಯನ್ನ ಥಾಯ್ಲೆಂಡ್ ಬಂದ್ ಮಾಡಿದೆ. ಈ ಮಧ್ಯೆ ಗಡಿ ಪ್ರದೇಶ ಪರ್ಸಾಟ್‌ನಲ್ಲಿ ಥಾಯ್ಲೆಂಡ್ ಅಪ್ರಚೋದಿತ ದಾಳಿ ಮಾಡಿದೆ ಅಂತ ಕಾಂಬೋಡಿಯಾ ಹೇಳಿಕೊಂಡಿದೆ. ಗಡಿ ಪ್ರದೇಶ ಕೋ ಕಾಂಗ್ ಪ್ರದೇಶ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ. ಎರಡೂ ದೇಶಗಳೂ ಪರಸ್ಪರ ತಮ್ಮ ರಾಯಭಾರ ಅಧಿಕಾರಿಗಳನ್ನ ವಾಪಸ್ ಕರೆಸಿಕೊಂಡಿವೆ.



















