ಬೆಂಗಳೂರಿನಲ್ಲಿ ಅನ್ಯರಾಜ್ಯದ ಯುವತಿ ನಾಲಿಗೆ ಹರಿ ಬಿಟ್ಟಿದ್ದಾಳೆ. ರಸ್ತೆ ಮೇಲಿದ್ದ ಚರಂಡಿ ನೀರು ಮೈಮೇಲೆ ಸಿಡಿದಿದ್ದಕ್ಕೆ ಬೆಂಗಳೂರಿಗರಿಗೆ ಹಿಡಿಶಾಪ ಹಾಕಿದ್ದಾಳೆ. ಕಾರು ಓಡಿಸುವ ಬೆಂಗಳೂರಿಗರ ಬಗ್ಗೆ ನೇಹಾ ಬಿಸ್ವಾಲ್ ಮನಬಂದಂತೆ ಮಾತನಾಡಿದ್ದಾರೆ. ಬೆಂಗಳೂರಿಗರಿಗೆ ತಲೆಯಲ್ಲಿ ಬುದ್ದಿ ಇಲ್ಲ..ಲದ್ದಿ ಇದೆ..
ಚೂ*** ಥೂ ಎಂದ ಒಡಿಶಾ ಮೂಲದ ನೇಹಾ ನಗರವಾಸಿಗಳ ವಿರುದ್ಧ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಜೋರಾಗಿ ಮಳೆ ಬರ್ತಿದ್ರೂ ವಾಹನಗಳನ್ನು ಜೋರಾಗಿ ಓಡಿಸ್ತಾರೆ. ಬೆಂಗಳೂರಲ್ಲಿರೋರು ಅನಕ್ಷರಸ್ಥರು ಎಂದು ನೇಹಾ ನಾಲಿಗೆ ಹರಿಬಿಟ್ಟಿದ್ದಾರೆ.



















