ಬೆಂಗಳೂರು : ವಿಶ್ವ ಕುಂದಾಪ್ರ ಕನ್ನಡ ದಿನಕ್ಕೆ ಸಿಎಂ ಸಿದ್ದರಾಮಯ್ಯ ಶುಭಾಶಯ ಕೋರಿದ್ದಾರೆ.
ಭಾಷೆಯ ಸೊಬಗು, ಬದುಕಿನ ವೈಶಿಷ್ಟ್ಯತೆಯಿಂದಾಗಿ ಕುಂದಾಪುರ ಜಾಗತಿಕ ಮಟ್ಟದಲ್ಲಿಯೂ ಗುರುತಿಸಿಕೊಂಡ ಊರು. ಜಾತಿ – ಧರ್ಮಗಳನ್ನು ಮೀರಿ ಕುಂದಾಪ್ರ ಕನ್ನಡ ಮನಸುಗಳನ್ನು ಬೆಸೆದಿರುವ ಒಂದು ಸುಂದರ ಭಾವ ಎಂದು ಸಿಎಂ ಹೇಳಿದ್ದಾರೆ.
ಜಗದಗಲ ಪಸರಿಸಿರುವ ಕನ್ನಡಿಗರೆಲ್ಲರಿಗೂ ಕುಂದಾಪುರ ಮಣ್ಣಿನ ಸಂಸ್ಕೃತಿ, ಸಂಪ್ರದಾಯಗಳನ್ನು ಸಂಭ್ರಮಿಸುವ ಕುಂದಾಪ್ರ ಕನ್ನಡ ದಿನದ ಶುಭಾಶಯಗಳು. ಇದು ಬರಿ ಭಾಷೆಯಲ್ಲ, ಬದುಕನ್ನು ಸಂಭ್ರಮಿಸುವ ಹಬ್ಬ ಎಂದಿದ್ದಾರೆ.



















