ಹಾಸನ : ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಅವರ ಶಾಸಕರಿಗೆ ೫೦ ಕೋಟಿ ಕೊಡಲಿ. ನಮಗೂ ಕೂಡ ಕನಿಷ್ಠ 40ಕೋಟಿ ಅನುದಾನ ನೀಡಬೇಕು. ನಾವು ಕೂಡಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದೇವೆ. ಮಾಧ್ಯಮಗಳಲ್ಲಿ ಬಿತ್ತರವಾದ ವರದಿಗಳನ್ನು ನೋಡಿ ನಮ್ಮ ಕ್ಷೇತ್ರದ ಜನ ಅನುದಾನಕ್ಕೆ ಹಲವಾರು ಕರೆ ಮಾಡುತ್ತಿದ್ದಾರೆ ಎಂದು ಆಲೂರು-ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಹೇಳಿದ್ದಾರೆ.
ಹಿಂದೆಂದೂ ಕೂಡ ಈ ರೀತಿಯಾದ ಪತ್ರ ಬಹಿರಂಗಗೊಂಡಿರಲಿಲ್ಲ. ನಾನು ಜನರಿಗೆ ಈಗ ತಿಳಿಹೇಳುವುದಕ್ಕೆ ಕಷ್ಟವಾಗುತ್ತಿದೆ. ಜನರಿಗೆ ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ ನೀಡಿದ್ದಾರೆ ಎಂದು ಹೇಳಿದ ಅರ್ಥ ಆಗುತ್ತಾ ? ಮುಖ್ಯಮಂತ್ರಿ ಅಂದರೆ ಕೇವಲ ಕಾಂಗ್ರೆಸ್ ನವರಿಗೆ ಮಾತ್ರ ಅಲ್ಲ. ನಮಗೂ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದವರು ಹೇಳಿದ್ದಾರೆ.
ಸಿದ್ದರಾಮಯ್ಯ ಹತ್ತು ಹದಿನೈದು ಬಾರಿ ಬಜೆಟ್ ಮಂಡಿಸಿರುವ ಅನುಭವಿ. ಈ ಸಮಸ್ಯೆ ಅರ್ಥ ಮಾಡಿಕೊಂಡು ನಮಗೂ ಅನುದಾನ ನೀಡಬೇಕು. ಇಲ್ಲವಾದರೆ ನಮ್ಮ ನಾಯಕರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಮಾಡುತ್ತೇವೆ. ಈ ರೀತಿ ತಾರತಮ್ಯ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಸಿಮೆಂಟ್ ಮಂಜು ಆಕ್ರೋಶ ಹೊರಹಾಕಿದ್ದಾರೆ.



















