ರಾಮನಗರ : ಎರಡು ಗುಂಪುಗಳ ನಡುವೆ ಗ್ಯಾಂಗ್ ವಾರ್ ನಡೆದಿದೆ. ಸೀಜರ್ ಸಿದ್ದ ಟೀಂ ಹಾಗೂ ಪಾದರಹಳ್ಳಿ ಸಂಜು ಟೀಂ ನಡುವೆ ಹಣಕಾಸು ವಿಚಾರ, ಹತ್ಯೆಗೆ ಶಂಕೆ ವಿಚಾರವಾಗಿ ಈ ಗ್ಯಾಂಗ್ ವಾರ್ ನಡೆದಿದೆ ಎಂದು ತಿಳಿದು ಬಂದಿದೆ.

ರಾಮನಗರ ತಾಲೂಕಿನ ಅಚ್ಚಲುದೊಡ್ಡಿ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಒಂಟಿ ಮನೆಯಲ್ಲಿ ಇದ್ದ ಸಿದ್ದನ ಟೀಂ ಮೇಲೆ ಸಂಜು ಟೀಂ ಅಟ್ಯಾಕ್ ಆಗಿದೆ.
ದಾಳಿ ವೇಳೆ ನಾಲ್ವರು ಗಾಯಗೊಂಡಿದ್ದು, ಮೂರು ಗಾಯಾಳುಗಳು ಚನ್ನಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಂಜು ಎಂಬಾತನನ್ನ ಹತ್ಯೆ ಮಾಡಲು ಬಂದಿರುವ ಶಂಕೆಯಿಂದ ಸಿದ್ದನ ಟೀಂ ಮೇಲೆ ಅಟ್ಯಾಕ್ ಮಾಡಲಾಗಿದೆ ಎಂಬ ಪ್ರಾಥಮಿಕ ಮಾಹಿತಿ ಈಗ ಲಭ್ಯವಾಗಿದೆ.
ಈ ಸಂಬಂಧಿಸಿದಂತೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.



















