ಬೆಂಗಳೂರು: ದೇಶದಲ್ಲಿರುವ 36 ಕೋಟಿ ಗ್ರಾಹಕರಿಗೆ ಭಾರ್ತಿ ಏರ್ ಟೆಲ್ ಸಿಹಿ ಸುದ್ದಿ ನೀಡಿದೆ. ಓಪನ್ ಎಐನ ಚಾಟ್ ಜಿಪಿಟಿ, ಗೂಗಲ್ ನ ಜೆಮಿನಿ ಮಾದರಿಯ ಎಐ ಟೂಲ್ ಅನ್ನು ಏರ್ ಟೆಲ್ ಅಭಿವೃದ್ಧಿಪಡಿಸಿದೆ. ಅಷ್ಟೇ ಅಲ್ಲ, ತನ್ನ ಗ್ರಾಹಕರಿಗೆ ಇದನ್ನು ಒಂದು ವರ್ಷದವರೆಗೆ ಉಚಿತವಾಗಿ ಸಬ್ ಸ್ಕ್ರಿಪ್ಶನ್ ನೀಡುವುದಾಗಿ ಕಂಪನಿಯು ಘೋಷಣೆ ಮಾಡಿದೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಈಗ ಪ್ರತಿಯೊಂದು ಕ್ಷೇತ್ರಕ್ಕೂ ಕಾಲಿಟ್ಟಿದೆ. ಇದನ್ನು ಮನಗಂಡ ಏರ್ ಟೆಲ್ ಕಂಪನಿಯು ಪರ್ ಪ್ಲೆಕ್ಸಿಟಿ ಎಂಬ ಎಐ ಟೂಲ್ ಅನ್ನು ಅಭಿವೃದ್ಧಿಪಡಿಸಿದೆ. ಒಂದು ವರ್ಷದವರೆಗೆ ಇದನ್ನು ಬಳಸಬೇಕು ಎಂದರೆ 17 ಸಾವಿರ ರೂಪಾಯಿ ಖರ್ಚಾಗುತ್ತದೆ. ಆದರೆ, ಕಂಪನಿಯು ಇದನ್ನು ಗ್ರಾಹಕರಿಗೆ ಉಚಿತವಾಗಿ ನೀಡುತ್ತಿದೆ. ಇದರಿಂದ ಗ್ರಾಹಕರಿಗೆ ಹಣ ಉಳಿಯಲಿದೆ.
ಭಾರತದಲ್ಲಿ ಭಾರ್ತಿ ಏರ್ ಟೆಲ್ ಕಂಪನಿಗೆ 36 ಕೋಟಿ ಗ್ರಾಹಕರಿದ್ದಾರೆ. ಏರ್ ಟೆಲ್ ಸಿಮ್, ಡಿಟಿಎಚ್, ವೈಫೈ ಸೇರಿ ಎಲ್ಲ ಸೇವೆಗಳು ಸೇರಿ ಒಟ್ಟು ಇಷ್ಟು ಗ್ರಾಹಕರಿದ್ದಾರೆ. ಇವರು ಕೂಡ ಎಐ ಬಳಸಬೇಕು ಎಂದು ಉಚಿತವಾಗಿ ಸೇವೆ ನೀಡಲು ಏರ್ ಟೆಲ್ ಮುಂದಾಗಿದೆ ಎಂದು ತಿಳಿದುಬಂದಿದೆ.
ಇದರ ಸಬ್ ಸ್ಕ್ರಿಪ್ಶನ್ ಪಡೆಯೋದು ಹೇಗೆ?
ಮೊದಲು ಎಐ ಥ್ಯಾಂಕ್ಸ್ ಆ್ಯಪ್ ಗೆ ಭೇಟಿ ನೀಡಬೇಕು
ಸಬ್ ಸ್ಕ್ರಿಪ್ಶನ್ಸ್ ಸೆಕ್ಷನ್ ಮೇಲೆ ಕ್ಲಿಕ್ ಮಾಡಿ, ಕ್ಲೇಮ್ ನೌ ಬಟನ್ ಮೇಲೆ ಕ್ಲಿಕ್ ಮಾಡಬೇಕು
ಹೊಸ ಪೇಜ್ ಓಪನ್ ಆಗುತ್ತದೆ. ಆಗ ಪರ್ ಪ್ಲೆಕ್ಸಿಟಿ ಆಪ್ಶನ್ ಮೇಲೆ ಕ್ಲಿಕ್ ಮಾಡಬೇಕು
ಪ್ರೊಸೀಡ್ ಆಯ್ಕೆ ಮೇಲೆ ಕ್ಲಿಕ್ ಮಾಡಿ, ಮೇಲ್ ಐಡಿ ನಮೂದಿಸಬೇಕು
ಮೇಲ್ ಐಡಿಗೆ ಒಟಿಪಿ ಬಂದಿರುತ್ತದೆ, ಅದನ್ನು ನಮೂದಿಸಬೇಕು
ಒಟಿಪಿ ನಮೂದಿಸಿದ ಬಳಿಕ ನಿಮಗೆ ಸಬ್ ಸ್ಕ್ರಿಪ್ಶನ್ ಸಿಗುತ್ತದೆ
ವೆಬ್ ಅಥವಾ ಪರ್ ಪ್ಲೆಕ್ಸಿಟಿ ಆ್ಯಪ್ ನಲ್ಲಿಎಐ ಟೂಲ್ ಬಳಸಬಹುದು