ಉಡುಪಿ: ‘ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಬಗ್ಗೆ ಕಾಂಗ್ರೆಸ್ ನವರ ಆರೋಪಗಳು ಸುಳ್ಳು ಎಂಬುವುದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಿಂದ ಸಾಬೀತಾಗಿದೆ’ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಕಾಂಗ್ರೆಸ್ ನಾಯಕರು ವಸ್ತುಸ್ಥಿತಿ ಪರಿಶೀಲಿಸದೆ, ಸುಳ್ಳು ಕಥೆಗಳನ್ನು ಸೃಷ್ಟಿಸಲು ಯತ್ನಿಸಿದರು. ಅವರಿಗೆ ಸೋಲಾಗಿದೆ’ ಎಂದಿದ್ದಾರೆ.
‘ಮೂರ್ತಿ ಫೈಬರ್ ನದ್ದು ಅಲ್ಲ ಹಿತ್ತಾಳೆಯದ್ದು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ಈ ಕುರಿತು ವಿಚಾರಣೆ ನಡೆಯಲಿ. ಥೀಮ್ ಪಾರ್ಕ್ ಕಾಮಗಾರಿ ಶ್ರೀಘ್ರ ಪೂರ್ಣಗೊಳಿಸಲಿ’ ಎಂದು ಒತ್ತಾಯಿಸಿದ್ದಾರೆ.



















