ಕಲಬುರುಗಿ ನಗರದ ಸರಾಫ್ ಬಜಾರ ಪ್ರದೇಶದಲ್ಲಿ ದೊಡ್ಡ ಕಳ್ಳತನ ಪ್ರಕರಣವೊಂದು ದಾಖಲಾಗಿದೆ.
ನಗರದಲ್ಲಿನ ಚಿನ್ನಾಭರಣ ತಯಾರಿಕಾ ಮಳಿಗೆ ʼಮಲಿಕ್ ಜುವೆಲ್ಲರ್ಸ್ ನಲ್ಲಿ ಖದೀಮರು ದೋಚಿ ಪರಾರಿಯಾಗಿದ್ದಾರೆ. ನಾಲ್ವರ ತಂಡ ಅಂಗಡಿಯಲ್ಲಿದ್ದ ಮಾಲೀಕನ ತಲೆಗೆ ಪಿಸ್ತೂಲ್ ಹಿಡಿದು, ಚಾಕು ತೋರಿಸಿ ಅಂದಾಜು 800 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಖದೀಮರು ಮುಖಕ್ಕೆ ಮಾಸ್ಕ್, ತಲೆಗೆ ಕ್ಯಾಪ್ ಧರಿಸಿ ಒಳಗೆ ಪ್ರವೇಖದೀಮರು ಮಳಿಗೆಗೆ ಪ್ರವೇಶಿಸುವ ದೃಶ್ಯ ಸಿಸಿಟಿವಿ ಕ್ಯಾಮೇರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಂದಾಜು 800 ಗ್ರಾಂ ಚಿನ್ನಾಭರಣ ದೋಚಿರುವ ಮಾಹಿತಿ ಇದೆ. ದರೋಡೆ ಪ್ರಕರಣ ಭೇದಿಸಲು ಐವರು ಹಿರಿಯ ಅಧಿಕಾರಿಗಳ ತಂಡ ರಚಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಶರಣಪ್ಪ ಮಾಹಿತಿ ನೀಡಿದ್ದಾರೆ.