ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಬರೋಬ್ಬರಿ 10 ವಿಕೆಟ್ ಕಬಳಿಸಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಕಾಶ್ ದೀಪ್ ಅವರಿಗೆ ಸಂಬಂಧಿಸಿದ ಕೆಲವು ವಿಡಿಯೋಗಳು ಈಗ ವೈರಲ್ ಆಗುತ್ತಿವೆ.
ಆಕಾಶ್ ದೀಪ್ ಆಡಿರುವ ಹಳೆಯ ಟೆನ್ನಿಸ್ ಬಾಲ್ ಕ್ರಿಕೆಟ್ ವಿಡಿಯೋಗಳು ಈಗ ವೈರಲ್ ಆಗುತ್ತಿವೆ. ಸುಮಾರು 9 ವರ್ಷಗಳ ಹಿಂದೆ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದ ಕನ್ನಡಿಗರು, ಕುಂದಾಪುರದಲ್ಲಿ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿದ್ದರು. “ಸೌದಿ ಅರೇಬಿಯಾ ” ಎನ್ನುವ ತಂಡಕ್ಕೆ ಬೌಲರ್ ಅವಶ್ಯಕತೆ ಇದ್ದಾಗ 12ನೇ ಆಟಗಾರನಾಗಿ ಆಕಾಶ್ ದೀಪ್ ತಂಡಕ್ಕೆ ಸೇರಿದ್ದರು. ಅಂದು ಆಕಾಶ್ ದೀಪ್ ಉತ್ತಮ ಪ್ರದರ್ಶನ ತೋರಿದ್ದರು. ಹೀಗಾಗಿ ತಂಡವು ಸೆಮಿಫೈನಲ್ ವರೆಗೂ ತಲುಪಿತ್ತು.
ಟೆನ್ನಿಸ್ ಬಾಲ್ ಕ್ರಿಕೆಟ್ ನಲ್ಲೂ ಶ್ರೇಷ್ಠ ಸಾಧನೆ ಮಾಡಿರುವ ಆಕಾಶ್ ದೀಪ್, 2016 ರಲ್ಲಿ ಮಂಗಳೂರಿನಲ್ಲಿ ನೆಡೆದ “ಉಡುಪಿ ಪ್ರಿಮಿಯರ್ ಲೀಗ್”ನಲ್ಲಿ ಉತ್ತಮ ಪ್ರದರ್ಶನ ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಈಗ ಅದೇ ಬೌಲರ್ ತಂಡಕ್ಕೆ ಆಸರೆಯಾಗಿರುವುದು ಸಂತಸದ ಸಂಗತಿಯಾಗಿದೆ.



















