ರಾಮನಗರ : ಮಧ್ಯರಾತ್ರಿ ಪ್ರಾವಿಜನ್ ಸ್ಟೋರ್ ಗೆ ನುಗ್ಗಿ ಕಳ್ಳತನ ನಡೆದಿದ್ದು, ಎರಡು ಲಕ್ಷ ರೂ ನಗದು, ಸಿಗರೇಟ್ ಸೇರಿದಂತೆ ಕೆಲವು ವಸ್ತುಗಳನ್ನ ಎತ್ತುಕೊಂಡು ಪರಾರಿ ಆಗಿರುವ ಘಟನೆ ರಾಮನಗರದ ಐಜೂರು ವೃತ್ತದ ಬಳಿ ನಡೆದಿದೆ.
ಕಿರಾಣಿ ಅಂಗಡಿಯ ಬೀಗ ಒಡೆದು ಕಳ್ಳತನ ಮಾಡಿದ್ದು, ಕಳ್ಳನ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಐಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ರಾಮಚಂದ್ರ ಎಂಬುವವರಿಗೆ ಸೇರಿದ ಲಕ್ಷ್ಮೀವೆಂಕಟೇಶ್ವರ ಟ್ರೇಡರ್ಸ್ ನಲ್ಲಿ ಕಳ್ಳತನ ನಡೆದಿದೆ.