ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ರಾಮಾಯಣ ಸಿನಿಮಾ ಇದೀಗ ಟ್ರೋಲ್ ಗೆ ಕಾರಣವಾಗಿದೆ. ರಣಬೀರ್ ಕಪೂರ್ ಹಾಗೂ ಯಶ್ ನಟನೆಯ ರಾಮಾಯಣ ಸಿನಿಮಾ ವಿವಾದಕ್ಕೆ ಕಾರಣವಾಗಿದೆ. ರಾಮಾಯಣ ಸಿನಿಮಾದಲ್ಲಿ ಯಶ್ ರಾವಣ ಪಾತ್ರದಲ್ಲಿ ಬಣ್ಣ ಹಚ್ಚಿದ್ದರೆ, ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಣಬೀರ್ ಕಪೂರ್ ವಿರುದ್ಧ ಗೋಮಾಂಸ ತಿನ್ನುವ ವಿಚಾರವಾಗಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಈ ಹಿಂದೆ ರಣಬೀರ್ ಕಪೂರ್ ಗೋಮಾಂಸ ತಿನ್ನುವುದಾಗಿ ಒಪ್ಪಿಕೊಂಡಿದ್ದರು. ಆ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ. ಹೀಗಾಗಿ, ರಾಮಾಯಣ ಸಿನಿಮಾದಲ್ಲಿ ಅವರು ರಾಮನ ಪಾತ್ರ ಮಾಡುತ್ತಿರುವುದನ್ನು ಕೆಲವರು ಪ್ರಶ್ನಿಸುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಗಾಯಕಿ ಚಿನ್ಮಯಿ ಶ್ರೀಪಾದ್ ಅವರು ಟ್ವೀಟ್ ಮಾಡುತ್ತಿದ್ದಾರೆ. ಈ ಹಿಂದೆ ನಟಿ ಕಂಗನಾ ರಣಾವತ್ ಕೂಡ ರಣಬೀರ್ ಕಪೂರ್ ಆಯ್ಕೆಯನ್ನು ವಿರೋಧಿಸಿದ್ದರು. ಈಗ ಇನ್ನೊಂದು ವಿವಾದ ಶುರುವಾಗಿದೆ.
ಈ ವಿಷಯಕ್ಕೆ ಸಂಬಂಧಿಸಿಂತೆ ಪರ-ವಿರೋಧದದ ಚರ್ಚೆಗಳು ಈಗಾಗಲೇ ಶುರುವಾಗಿದೆ. ಗೋಮಾಂಸ ತಿನ್ನುವ ನಟನಿಂದ ರಾಮನ ಪಾತ್ರ ಮಾಡಿಸುವುದು ಎಷ್ಟು ಸರಿ? ಬಾಲಿವುಡ್ ಮಂದಿಗೆ ಏನಾಗಿದೆ ಎಂದು ಕೆಲವರು ಪ್ರಶ್ನೆ ಮಾಡ್ತಿದ್ದಾರೆ.. ಈ ಬಗ್ಗೆ ರಣಬೀರ್ ಕಪೂರ್ ಅವರು ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಚಿತ್ರತಂಡದವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.