ತುಮಕೂರು : ಸ್ವತಃ ಗ್ರಾಮಸ್ಥರೇ ಕಾರ್ಯಾಚರಣೆ ಮಾಡಿ ಚಿರತೆ ಸೆರೆ ಹಿಡಿದಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ಅಂಕಲಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ನಾಲ್ಕೈದು ತಿಂಗಳಿಂದ ಗ್ರಾಮದ ಸುತ್ತಮುತ್ತ ಓಡಾಡುತ್ತಿದ್ದ ಚಿರತೆಯಿಂದ ಭಯದ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮಸ್ಥರ ಮನವಿ ಮೇರೆಗೆ ಗ್ರಾಮದ ತೋಟವೊಂದರಲ್ಲಿ ಅರಣ್ಯ ಇಲಾಖೆಯವರು ಬೋನ್ ಇರಿಸಿದ್ದರು. ಬೋನ್ ಇರಿಸಿ ನಾಲ್ಕೈದು ವಾರಗಳೆ ಕಳೆದರೂ ಚಿರತೆ ಬೋನಿಗೆ ಬಿದ್ದಿರಲಿಲ್ಲ. ಗ್ರಾಮಸ್ಥರೇ ಪ್ರಾಣದ ಹಂಗು ತೊರೆದು ಚಿರತೆ ಚಲನವಲ, ಓಡಾಡುವ ಮಾರ್ಗವನ್ನ ಕಂಡು ಹಿಡಿದಿದ್ದರು. ಕೊನೆಗೆ ಊರಿನೊಳಗಡೆ ಬೋನ್ ಇರಿಸಲಾಗಿತ್ತು. ಬೋನ್ ಇಟ್ಟ ಎರಡೇ ದಿನದಲ್ಲಿ ಚಿರತೆ ಸೆರೆಹಿಡಿಯಲಾಗಿದೆ.