ಹಾರೋಹಳ್ಳಿ : ಮಕ್ಕಳ ಜಗಳಕ್ಕೆ ಪೊಲೀಸರು ಮಧ್ಯಪ್ರವೇಶ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿ ಕುಟುಂಬದವರಿಗೆ ತಿಳುವಳಿಕೆ ಹೇಳಿದ್ದಾರೆ.
ಮುನಿರಾಜು ಎಂಬುವವರು ಮಗನ ಮೇಲೆ ಹಲ್ಲೆ ಮಾಡಿದ್ದಾರೆಂದು ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬದವರನ್ನು ವಿಚಾರಣೆ ಮಾಡುವ ಉದ್ಧೇಶದಿಂದ ಠಾಣೆಗೆ ಕರೆಯಿಸಿದ್ದಾರೆ. ಮನೆ ಮುಂದೆ ಓಡಾಟದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಮನೆಯವರ ನಡುವೆ ಜಗಳ ಆರಂಭವಾಗಿತ್ತು.
ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿಯ ಪರುವಯ್ಯನಪಾಳ್ಯದಲ್ಲಿ ನಡೆದಿರುವ ಈ ಘಟನೆ ನಡೆದಿದೆ. ಅಕ್ಷಯ್ ಎಂಬ ಬಾಲಕನ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ. ಮುನಿರಾಜು ಎಂಬುವರ ಪುತ್ರ ಅಕ್ಷಯ್ ಗೆ ಮಾನಸ ಹಾಗೂ ಕುಟುಂಬಸ್ಥರಿಂದ ಹಲ್ಲೆ ಮಾಡಿದ್ದಾರೆಂದು ಆರೋಪವಿದೆ.