ಶಿವಮೊಗ್ಗ : ಹ್ಯಾಟ್ರೀಕ್ ಹೀರೋ ಡಾ. ಶಿವರಾಜ್ ಕುಮಾರ್ ದಂಪತಿ ಸಮೇತ ಜೋಗದ ಸೊಬಗನ್ನು ಕಣ್ತುಂಬಿಕೊಂಡಿದ್ದಾರೆ.
ಸಿನೆಮಾ ಹಾಗೂ ರಿಯಾಲಿಟಿ ಶೋ ಎಂದು ತುಂಬಾ ಬ್ಯುಸಿಯಾಗಿದ್ದ ಕರುನಾಡ ಚಕ್ರವರ್ತಿ ಡಾ. ಶಿವಕುಮಾರ್ ಪ್ರಕೃತಿ ಸೊಬಗಿಗೆ ಮಾರು ಹೋಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜಗತ್ಪ್ರಸಿದ್ಧ ಜೋಗ ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳುವುದಕ್ಕಾಗಿ ಆಗಮಿಸಿದ ಶಿವಣ್ಣ ಹಾಗೂ ಗೀತಾ ದಂಪತಿಯನ್ನು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಸ್ವಾಗತಿಸಿ ಅವರಿಗೆ ಸಾಥ್ ನೀಡಿದ್ದಾರೆ.
ಮಳೆಗಾಲದಲ್ಲಿ ತುಂಬಿ ಹರಿಯುವ ಜೋಗ ಜಲಪಾತದ ದೃಶ್ಯಗಳನ್ನು ಶಿವಣ್ಣ ಕಣ್ತುಂಬಿಕೊಂಡಿದ್ದಾರೆ. ತಂದೆ ವರನಟ ಡಾ. ರಾಜ್ ಕುಮಾರ್ ಅವರು ಹಾಡಿರುವ ಸಾಯೋದರೊಳಗೆ ಒಮ್ಮೆ ನೋಡು ಜೋಗದ ಗುಂಡಿ ಎಂಬ ಪ್ರಸಿದ್ಧ ಗೀತೆಯನ್ನು ಶಿವಣ್ಣ ಈ ವೇಳೆ ನೆನಪಿಸಿಕೊಂಡಿದ್ದಾರೆ.



















