ಬೆಂಗಳೂರು: ಎಲ್ಐಸಿ ಏಜೆಂಟ್ ಗಳ ಒತ್ತಾಯಕ್ಕೆ ಮಣಿದು, ನಮಗೂ ಒಂದು ಜೀವ ವಿಮೆ ಸುರಕ್ಷತೆ ಇರಲಿ ಎಂದೋ ಎಲ್ಐಸಿ ಪಾಲಿಸಿ ಮಾಡಿಸಿರುತ್ತೀರಿ. ಆದರೆ, ಆರ್ಥಿಕ ಸಂಕಷ್ಟ ಸೇರಿ ಹಲವು ಕಾರಣಗಳಿಂದ ತಿಂಗಳು ಅಥವಾ ವರ್ಷಗಟ್ಟೆಲೆ ಎಲ್ಐಸಿ ಪಾಲಿಸಿ ಕಟ್ಟಿರುವುದಿಲ್ಲ. ಆದರೆ, ಮೊದಲು ಹಲವು ಕಂತುಗಳನ್ನು ಕಟ್ಟಿರುತ್ತೀರಿ. ಈಗ ಹಣಕಾಸು ಸ್ಥಿತಿ ಸುಧಾರಿಸಿದೆ, ಎಲ್ಐಸಿ ಪಾಲಿಸಿ ಏನು ಮಾಡಬೇಕು ಎಂಬ ಗೊಂದಲ ನಿಮ್ಮನ್ನು ಕಾಡುತ್ತಿದೆಯೇ? ಹಾಗಾದ್ರೆ, ಚಿಂತೆ ಬೇಡ, ನೀವು ಕೆಲ ವರ್ಷಗಳಿಂದ ಹಾಗೆಯೇ ನಿಷ್ಕ್ರಿಯಗೊಳಿಸಿರುವ ಎಲ್ಐಸಿ ಪಾಲಿಸಿಯನ್ನು ಮರಳಿ ಪಡೆಯಬಹುದು. ಹೇಗಂತೀರಾ? ಮುಂದೆ ಓದಿ.
ರಿಕವರಿ ಮಾಡುವುದು ಹೇಗೆ?
ನಿಷ್ಕ್ರಿಯಗೊಂಡಿರುವ ಎಲ್ಐಸಿ ಖಾತೆಯನ್ನು ರಿಕವರಿ ಮಾಡಬಹುದಾಗಿದೆ. ನೀವು ಹತ್ತಿರದ ಎಲ್ಐಸಿ ಶಾಖೆ ಅಥವಾ ಏಜೆಂಟ್ ಅವರನ್ನು ಸಂಪರ್ಕಿಸಿ, ಪಾಲಿಸಿ ಸ್ಥಿತಿಯನ್ನು ಪರಿಶೀಲಿಸಬಹುದು. ಫಾರ್ಮ್ 680 ಅಥವಾ ಎಲ್ಐಸಿ ಒದಗಿಸಿದ ರಿಕವರಿ ವಿನಂತಿ ಫಾರ್ಮ್ ಅನ್ನು ಭರ್ತಿ ಮಾಡಬಹುದು. ನೀವು ತಪ್ಪಿಸಿದ ಎಲ್ಲಾ ಪ್ರೀಮಿಯಂಗಳನ್ನು ಬಡ್ಡಿಯೊಂದಿಗೆ ಪಾವತಿ ಮಾಡಬೇಕಾಗುತ್ತದೆ. ಇದಾದ ನಂತರವೇ ಮತ್ತೆ ಸಕ್ರಿಯವಾಗುತ್ತದೆ.
ನೀವು ನಿಮ್ಮ ಪಾಲಿಸಿಗಳನ್ನು ಈ ಗ್ರೇಸ್ ಅವಧಿಯೊಳಗೆ ಪ್ರೀಮಿಯಂ ಪಾವತಿಸದಿದ್ದರೆ ಮಾತ್ರ ನಿಮ್ಮ ಪಾಲಿಸಿ ರದ್ದಾಗುತ್ತದೆ. ಗ್ರೇಸ್ ಅವಧಿ ಮುಗಿದ ನಂತರ ನಿಮ್ಮ ಜೀವ ವಿಮೆಯನ್ನು ರದ್ದುಗೊಳಿಸಲಾಗುತ್ತದೆ. ಇದರ ಜತೆಗೆ ನಿಮ್ಮ ಪಾಲಿಸಿ ಮೇಲಿನ ಬೋನಸ್ ಮತ್ತು ಲಾಯಲ್ಟಿ ಅನುಕೂಲವನ್ನು ತಡೆಹಿಡಿಯಲಾಗುತ್ತದೆ. ನೀವು ನಂತರ ಪಾಲಿಸಿಯನ್ನು ಸಕ್ರಿಯಗೊಳಿಸದಿದ್ದರೆನೀವು ಮೆಚ್ಯೂರಿಟಿ ಪ್ರಯೋಜನಗಳಿಗೆ ಅರ್ಹತೆಯನ್ನು ಕಳೆದುಕೊಳ್ಳುತ್ತೀರಿ.
ನಿಮ್ಮ ಪಾಲಿಸಿಗಳು 6 ತಿಂಗಳಿಗಿಂತ ಹೆಚ್ಚು ಕಾಲ ರದ್ದಾಗಿದ್ದರೆ ಅಥವಾ ಹೆಚ್ಚಿನ ಮೊತ್ತದ ವಿಮಾ ಯೋಜನೆಗಳಿದ್ದರೆ, ಎಲ್ಐಸಿಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ದಾಖಲೆಗಳನ್ನು ನೀಡಿ ಮತ್ತೆ ಸಕ್ರಿಯಗೊಳಿಸಬಹುದು. 2 ದಿಂದ 5 ವರ್ಷ ವಿಳಂಬವಾದರೆ, ಅದಕ್ಕೆ ಶೇ.8-10ರಷ್ಟು ಬಡ್ಡಿಯನ್ನು ಪಾವತಿಸುವ ಮೂಲಕ ಪಾಲಿಸಿಯನ್ನು ವಾಪಸ್ ಪಡೆಯಬಹುದು. ಐದು ವರ್ಷಕ್ಕಿಂತ ಹೆಚ್ಚು ನಿಷ್ಕ್ರಿಯವಾಗಿದ್ದರೆ, ನೀವು ಅದನ್ನು ರಿಕವರಿ ಮಾಡಲು ಬರುವುದಿಲ್ಲ.